ಶಿರಸಿ: ವಾ.ಕ.ರ.ಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ ಶಿರಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಅಲ್ಲಿ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಮಂದಗತಿಯಲ್ಲಿ ಕೆಲಸ ನಡೆಯುತ್ತಿರುವ ಬಗ್ಗೆ ಅವರು ಡಿಪೋದವರನ್ನು ಪ್ರಶ್ನಿಸಿದರು. ಗುತ್ತಿಗೆದಾರರಿಗೆ ಸೂಕ್ತ ನಿದರ್ಶನ ನೀಡುವಂತೆ ಅವರು ಅಧೀನ ಅಧಿಕಾರಿಗಳಿಗೆ ತಾಕೀತು ಮಾಡಿದರು. `ಆದಷ್ಟು ಬೇಗ ಕೆಲಸ ಮುಗಿಯಬೇಕು\’ ಎಂದು ಅವರು ಸೂಚಿಸಿದರು.
ಶಿರಸಿ ಘಟಕದ ಆವರಣದಲ್ಲಿ ಕಾಂಕ್ರಿಟಿಕರಣ, ವಿಭಾಗೀಯ ಕಾರ್ಯಾಗಾರದ ಕಟ್ಟಡ ನವೀಕರಣದ ಬಗ್ಗೆ ಪರಿಶೀಲಿಸಿದರು. ವಿಭಾಗ ಮಟ್ಟದ ಎಲ್ಲ ಅಧಿಕಾರಿಗಳ ಸಭೆ ನಡೆಸಿ ಕೆಲಸದ ಬಗ್ಗೆ ಚರ್ಚಿಸಿದರು. ಸಾರಿಗೆ ಕಾರ್ಯಾಚರಣೆಯನ್ನು ಉತ್ತಮಗೊಳಿಸುವ ಹಾಗೂ ಸಾರ್ವಜನಿಕರಿಗೆ ಉತ್ತಮ ರೀತಿಯ ಸಾರಿಗೆ ಸೌಲಭ್ಯವನ್ನು ಒದಗಿಸುವ ಬಗ್ಗೆ ನಿರ್ದೇಶನಗಳನ್ನು ನೀಡಿದರು.