ಸಿದ್ದಾಪುರ: ಹಾರ್ಸಿಕಟ್ಟಾ ಹಾಗೂ ಸಿದ್ದಾಪುರ ಪಟ್ಟಣದಲ್ಲಿ ಅಳವಡಿಸಿದ್ದ ಸೋಲಾರ್ ಬ್ಯಾಟರಿಗಳನ್ನು ಕದ್ದಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
ಕಾನಸೂರಿನ ಮೊಹಮ್ಮದ್ ಕೈಫ್ ಅಬುಬಕ್ಕರ್ ಸಾಬ್ (19) ಹಾಗೂ ಚಂದನ ಶ್ರೀಧರ ಆಚಾರಿ (19) ಬಂಧಿತರು.
ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಅಳವಡಿಸಿದ್ದ ಬ್ಯಾಟರಿಯನ್ನು ಅವರು ಕದ್ದಿದ್ದರು. ಮುಠ್ಠಳ್ಳಿಯ ಸುಧಾಕರ ಮಡಿವಾಳ ಅವರ ಮನೆಯ ಹತ್ತಿರ ಅಳವಡಿಸಿದ್ದ ಬ್ಯಾಟರಿಯನ್ನು ಅವರು ಬಿಟ್ಟಿರಲಿಲ್ಲ. ಜೊತೆಗೆ ಸಿದ್ದಾಪುರ ಪಟ್ಟಣದ ನೆಹರೂ ಮೈದಾನದ ಬಳಿ ಅಳವಡಿಸಿದ್ದ 4 ಬ್ಯಾಟರಿಗಳನ್ನು ಅಪಹರಿಸಿದ್ದರು. ಈ ಎಲ್ಲಾ ಪ್ರಕರಣದ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಶಿರಸಿಯಲ್ಲಿ ಕಳ್ಳತನವಾಗಿದ್ದ ಬ್ಯಾಟರಿಗಳು ಸಹ ಇವರಲ್ಲಿ ಸಿಕ್ಕಿದೆ. ಕಳ್ಳತನಕ್ಕೆ ಬಳಸಿದ್ದ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
S News Digitel
ಮನೆ ಬಿದ್ದು ಮಹಿಳೆಗೆ ಗಾಯ
ಮುಂಡಗೋಡ: ನಿರಂತರ ಮಳೆಯಿಂದ ಮನೆಯೊಂದರ ಗೋಡೆ ಕುಸಿದ ಪರಿಣಾಮ ಸಾತವ್ವ ಭೀಮಣ್ಣ ಬೆಂಗಳೂರ (50) ಎಂಬಾತರ ತಲೆಗೆ ಪೆಟ್ಟಾಗಿದೆ.
ಕಲಕೇರಿ ಪ್ಲಾಟ್ ಹೊನ್ನಿಕೊಪ್ಪ ಗ್ರಾಮದಲ್ಲಿ ವಾಸವಿದ್ದ ಅವರ ಮನೆ ಮೈಮೇಲೆ ಬಿದ್ದಿದೆ. ಅಟೆಲ್ ಸಾಬ್ ಅತ್ತಾರ ಎಂಬಾತರಿಗೆ ಸೇರಿದ ಮನೆ ಇದಾಗಿದ್ದು, ಗಾಯಾಳುವಿಗೆ ತಾಲೂಕಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳು ಸ್ಥಳ ಭೇಟಿ ನಡೆಸಿದ್ದಾರೆ.
S News Digitel