`ದೇಹ ಎಂಬುದು ದೇವಾಲಯ. ಪ್ರತಿ ಅಂಗದಲ್ಲಿಯೂ ದೇವರಿದ್ದು, ಅಂಗಾoಗಳ ದುರುಪಯೋಗ ನಡೆದರೆ ಆಯಾ ಭಾಗದ ದೇವರಿಗೆ ಕೋಪ ಬರುವುದು ಖಚಿತ\’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಹೇಳಿದ್ದಾರೆ
ಗೋಕರ್ಣದ ಅಶೋಕೆಯಲ್ಲಿ ಗುರುವಾರ ಆಶೀರ್ವಚನ ನೀಡಿದ ಅವರು `ನಾವು ಪರರಿಗೆ ಮಾಡುವುದನ್ನೇ ದೇವರು ನಮಗೆ ಪ್ರತಿಫಲ ನೀಡುತ್ತಾನೆ\’ ಎಂದರು. `ಜೀವನದಲ್ಲಿ ತಪ್ಪು, ಅನ್ಯಾಯ ಮಾಡಬಾರದು. ಮಾಡಿದರೆ ನಮ್ಮೊಳಗಿನ ದೇವರು ನಮಗೆ ಅದೇ ಫಲ ನೀಡುತ್ತಾನೆ. ಏಕೆಂದರೆ ದೇವತೆಗಳು ದೂರದೆಲ್ಲೆಲ್ಲೂ ಇಲ್ಲ. ಉಗುರ ತುದಿಯಿಂದ ಕೂದಲವರೆಗೆ ಪ್ರತಿಯೊಂದು ಅಂಗಾAಗಗಳಲ್ಲಿಯೂ ದೇವರಿದ್ದಾನೆ\’ ಎಂದರು. `ಇನ್ನೊಬ್ಬರಿಗೆ ಪೀಡೆ ಅಥವಾ ಹಿಂಸೆ ಮಾಡಿದಾಗ ಮತ್ತೆ ನಮಗೇ ಅದು ಹಿಂದಿರುತ್ತದೆ\’ ಎಂದು ಹೇಳಿದರು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಗುರುವಾರ ಚಾತುರ್ಮಾಸ್ಯ ವ್ರತನಿರತರಾದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.