ಯಲ್ಲಾಪುರ: `ಪಟ್ಟಣದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಪ್ರಯತ್ನ ನಡೆಸುವೆ\’ ಎಂದು ಪಟ್ಟಣ ಪಂಚಾಯತದ ನೂತನ ಅಧ್ಯಕ್ಷೆ ನರ್ಮದಾ ನಾಯ್ಕ ಹಾಗೂ ಉಪಾಧ್ಯಕ್ಷ ಅಮಿತ್ ಅಂಗಡಿ ಆಶ್ವಾಸನೆ ನೀಡಿದರು.
ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ (ಫೈರೋಜ್) ಮುಂದಾಳತ್ವದಲ್ಲಿ ಮುಸ್ಲಿಂ ಸಮುದಾಯದವರ ಸನ್ಮಾನ ಸ್ವೀಕರಿಸಿದ ಅವರು `ಎಲ್ಲಾ ವಾರ್ಡುಗಳ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಲಾಗುವುದು. ಜೊತೆಗೆ ಅಲ್ಲಿನ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಮುಖಂಡರ ಸಮ್ಮುಖದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು\’ ಎಂದು ಭರವಸೆ ನೀಡಿದರು.
`ಯಲ್ಲಾಪುರ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಜನರಿಗೆ ತೊಂದರೆ ಆಗದ ರೀತಿಯಲ್ಲಿ ಪಟ್ಟಣ ಪಂಚಾಯತ ಆಡಳಿತ ನಿರ್ವಹಿಸಲಿದೆ. ಯಾವುದೇ ದೂರುಗಳಿದ್ದರೂ ಜನ ತಮ್ಮನ್ನು ಭೇಟಿ ಮಾಡಬಹುದು\’ ಎಂದವರು ಹೇಳಿದರು. ಪ್ರಮುಖರಾದ ಇರ್ಷಾದ್ ಕಾಗಲ್ಕರ್, ಅಬ್ದುಲ್ ರಜಾಕ್ ಹಲ್ವಾಯಿಗಾರ್, ಖಾಜಾ ಅತ್ತಾರ್ , ಇರ್ಫಾನ್ ಕಾನಳ್ಳಿ ಹಾಜರಿದ್ದರು.