ಯಲ್ಲಾಪುರ: ಇಡಗುಂದಿ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಬೈಕಿನಲ್ಲಿ ಹೋಗುತ್ತಿದ್ದ ವಿಶ್ವೇಶ್ವರ ರಾಮಕೃಷ್ಣ ಸಭಾಹಿತ ಅವರಿಗೆ ಅಪರಿಚಿತ ಲಾರಿ ಗುದ್ದಿದೆ.
ಪರಿಣಾಮ ವಿಶ್ವೇಶ್ವರ ಸಭಾಹಿತ ಅವರ ಬಲಗಾಲಿನ ಪಾದ ಮುರಿದಿದೆ. ಅಗಸ್ಟ 20ರ ಸಂಜೆ 5.15ರ ಆಸುಪಾಸಿಗೆ ಅವರು ರಾಷ್ಟಿçÃಯ ಹೆದ್ದಾರಿ ಮೇಲೆ ನಿಧಾನವಾಗಿ ಹೋಗುತ್ತಿದ್ದರು. ಆಗ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಜೋರಾಗಿ ಲಾರಿ ಓಡಿಸಿಕೊಂಡು ಬಂದ ಚಾಲಕ ಅವರ ಬೈಕಿಗೆ ಗುದ್ದಿದ್ದಾನೆ. ಮುಂದಿದ್ದ ವಾಹನ ಹಿಂದಿಕ್ಕುವ ಬರದಲ್ಲಿ ನಿಧಾನವಾಗಿ ಬೈಕ್ ಓಡಿಸುತ್ತಿದ್ದವರಿಗೆ ಆತ ಅಪಘಾತ ಮಾಡಿದ್ದಾನೆ.
ಗಾಯಗೊಂಡ ವಿಶ್ವೇಶ್ವರ ಸಭಾಹಿತ ಆಸ್ಪತ್ರೆ ಸೇರಿದ್ದು, ಸಾಮಾಜಿಕ ಕಾರ್ಯಕರ್ತ ಗಣಪತಿ ಮುದ್ದೆಪಾಲ್ ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಅಪರಿಚಿತ ಲಾರಿ ಚಾಲಕ ಅಪಘಾತದ ನಂತರ ಗಾಯಾಳು ಉಪಚರಿಸದೇ ಪರಾರಿಯಾಗಿದ್ದು, ಆತ ಅಪಘಾತದ ಬಗ್ಗೆ ಪೊಲೀಸ್ ಠಾಣೆಗೂ ಮಾಹಿತಿ ನೀಡಿಲ್ಲ.