ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಜನರ ಮೇಲೆ ಕರಡಿ ದಾಳಿ ನಡೆಸಿದೆ.
ಅಗಸ್ಟ 17ರಂದು ಬೊಂಬಡಿಕೊಪ್ಪ ಕಾಡಿಗೆ ಹೋಗಿದ್ದ ಬಾಗು ಕಾಕೋಡು ಎಂಬಾತರ ಮೇಲೆ ಕರಡಿ ಆಕ್ರಮಣ ನಡೆಸಿತ್ತು. ಮೈ-ಕೈ ಪರಚಿಕೊಂಡ ಬಾಗು ಆಸ್ಪತ್ರೆ ಸೇರಿದ್ದರು.
ಇದನ್ನೂ ಓದಿ: ಕಿರವತ್ತಿ ಕಾಡಿನಲ್ಲಿ ಕರಡಿ ದಾಳಿ
ಅಗಸ್ಟ 30ರಂದು ಮತ್ತೆ ಅದೇ ಪ್ರದೇಶದಲ್ಲಿ ಇನ್ನೊಬ್ಬರ ಮೇಲೆ ಕರಡಿ ದಾಳಿ ನಡೆಸಿದೆ. ತಮ್ಮ ಜಮೀನಿಗೆ ಬೇಲಿ ನಿರ್ಮಿಸಿಕೊಳ್ಳುತ್ತಿದ್ದ ಪರಶುರಾಮ ದುಗ್ಗಾ ನಾಯ್ಕ ಎಂಬಾತರಿಗೆ ಕರಡಿ ಗಾಯಗೊಳಿಸಿದೆ. ಕಂಚನಳ್ಳಿ ಮುಂಡವಾಡ ಗ್ರಾಮದಲ್ಲಿ ಪರಶುರಾಮ ದುಗ್ಗಾ ನಾಯ್ಕ ಬೇಲಿ ನಿರ್ಮಿಸುತ್ತಿದ್ದರು. ಇದನ್ನು ಸಹಿಸದ ಕರಡಿ ಅವರ ಮೇಲೆ ಏಕಾಏಕಿ ಆಕ್ರಮಣ ನಡೆಸಿದೆ. ದೊಡ್ಡದಾಗಿ ಕೂಗಿಕೊಂಡ ಕಾರಣ ಕರಡಿ ಕಾಡು ಸೇರಿದ್ದು, ಅವರು ಜೀವ ಉಳಿಸಿಕೊಂಡು ಆಸ್ಪತ್ರೆ ಸೇರಿದ್ದಾರೆ.
ಪರಶುರಾಮ್ ದುಗ್ಗಾ ನಾಯ್ಕ ಅವರ ತಲೆ, ಮುಖ, ಕೈ ಕಾಲುಗಳಿಗೆ ಭಾರೀ ಪ್ರಮಾಣದ ಗಾಯವಾಗಿದೆ.
ಪ್ರಸ್ತುತ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.