ಕಾರವಾರ: ಬಿಣಗಾ ರಾಮನಗರದ ಆಟೋಚಾಲಕ ನಿತೀಶ್ ರಮೇಶ್ ರೇವಂಡಕರ್ ಅವರಿಗೆ ಅಪರಿಚಿತ ಶವ ಕಾಣಿಸಿದೆ.
ಅಗಸ್ಟ 29ರ ರಾತ್ರಿ ಅವರು ಬಿಣಗಾ ಕಡೆ ಆಟೋದಲ್ಲಿ ಹೋಗುತ್ತಿರುವಾಗ ಕೊಳೆತ ವಾಸನೆ ಬಂದಿದ್ದು, ಆಟೋ ನಿಲ್ಲಿಸಿ ವಾಸನೆ ಬಂದ ಹುಡುಕಾಟ ನಡೆಸಿದ್ದಾರೆ. ಆಗ ಕಪ್ಪು ಬಣ್ಣದ ಬರ್ಮೋಡಾ ಚಡ್ಡಿ ಹಾಗೂ ನೀಲಿ ಲುಂಗಿ ಧರಿಸಿದ 55 ವರ್ಷದ ವ್ಯಕ್ತಿ ಅಲ್ಲಿ ಬಿದ್ದಿರುವುದು ಅವರ ಕಣ್ಣಿಗೆ ಬಿದ್ದಿದೆ. ಮದ್ಯದ ನಶೆ ಅಥವಾ ಅನಾರೋಗ್ಯದಿಂದ ಆತ ಅಲ್ಲಿ ಬಿದ್ದಿರಬಹುದು ಎಂದು ಭಾವಿಸಿದ ನಿತೀಶ್ ಹತ್ತಿರ ಹೋಗಿ ನೋಡಿದ್ದಾರೆ. ಆಗ ಆತ ಸಾವನಪ್ಪಿರುವುದು ಗೊತ್ತಾಗಿದೆ. ಜೊತೆಗೆ ಮುಖ ಹಾಗೂ ಮೈಮೇಲೆ ಹುಳಗಳಾಗಿದ್ದು, ಆತ ಸಾವನಪ್ಪಿ ಕೆಲ ದಿನ ಕಳೆದಿರುವ ಬಗ್ಗೆ ಅವರು ಅಂದಾಜಿಸಿದ್ದಾರೆ.
ಸಾವನಪ್ಪಿದ ವ್ಯಕ್ತಿ ಯಾರು? ಎಂದು ಅವರು ಅವರಿವರಲ್ಲಿ ಮಾಹಿತಿ ಕೇಳಿದ್ದಾರೆ. ಆದರೆ, ಯಾರಿಗೂ ಆತನ ಬಗ್ಗೆ ಮಾಹಿತಿ ಇರಲಿಲ್ಲ. ಆತ ಕಾಣೆಯಾದ ಬಗ್ಗೆ ಅಥವಾ ಸಾವನಪ್ಪಿದ ಬಗ್ಗೆ ಈವರೆಗೂ ಯಾರು ದೂರು ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನಲೆ ಅಪರಿಚಿತ ವ್ಯಕ್ತಿಯ ಸಾವಿನಲ್ಲಿ ಸಾಕಷ್ಟು ಸಂಶಯವಿರುವ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ.
S News Digitel
ಬೈಕಿನಿಂದ ಬಿದ್ದು ಸಾವನಪ್ಪಿದ ಚಾಲಕ
ಜೊಯಿಡಾ: ಉಳುವಿ ಬಳಿ ಅಗಸ್ಟ 18ರಂದು ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಧಾರವಾಡದ ಪ್ರಕಾಶ ಆನಡ (24) ಎಂಬಾತರುಅಗಸ್ಟ 30ರಂದು ಸಾವನಪ್ಪಿದ್ದಾರೆ.
ಅಗಸ್ಟ 18ರಂದು ರಾತ್ರಿ 10.10ಕ್ಕೆ ಉಳುವಿ ಐಬಿ ಕ್ರಾಸ್ ಬಳಿ ಈತ ಓಡಿಸುತ್ತಿದ್ದ ಬೈಕ್ ಸ್ಕಿಡ್ ಆಗಿತ್ತು. ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ಸಹ ಸವಾರನಾದ ಕಿರಾಣಿ ವ್ಯಾಪಾರಿ ನಾಗರಾಜ ಈರಪ್ಪ ಅಂಗಡಿ (29) ಎಂಬಾತರಿಗೂ ಪೆಟ್ಟಾಗಿತ್ತು. ಗಾಯಗೊಂಡವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಕಾರ್ಪೋರೇಶನ್\’ನಲ್ಲಿ ಚಾಲಕನಾಗಿದ್ದ ಪ್ರಕಾಶ್ ಆನಡ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದರು.
S News Digitel