ಕಾರವಾರ: ಅಸ್ನೋಟಿಯ ಭಗತವಾಡದಲ್ಲಿರುವ ರೇಷ್ಮಾ ಪ್ರಕಾಶ ತಳ್ಳೇಕರ್ ಎಂಬಾತರ ಮನೆಗೆ ನುಗ್ಗಿದ ಶ್ರೀಧರ ಕೃಷ್ಣಾ ಕಾಣಕೋಣಕರ ಎಂಬಾತ ಅವರ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ಅಗಸ್ಟ 30ರಂದು ರಾತ್ರಿ 8. 45ಕ್ಕೆ ರೇಷ್ಮಾ ಮನೆಯಿಂದ ಹೊರಗಿದ್ದರು. ಆಗ ಅವರ ಮನೆಯೊಳಗೆ ನುಗ್ಗಿದ ಶ್ರೀಧರ್ ಕಪಾಟು ತೆಗೆದು ಅಲ್ಲಿದ್ದ 15 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ ಚಿನ್ನದ ಬಳೆ ಜೊತೆ 2 ಸಾವಿರ ರೂ ನಗದು ಹಣ ದೋಚಿದ್ದಾನೆ. ರೇಷ್ಮಾ ಒಳಗೆ ಬಂದಿರುವುದನ್ನು ನೋಡಿ ಆತ ಅಲ್ಲಿಂದ ಓಡಿ ಪರಾರಿಯಾಗಿದ್ದು, ಕಳ್ಳತನ ನಡೆಸಿರುವುದು ಆತನೇ ಎಂದು ಖಚಿತಪಡಿಸಿಕೊಂಡ ನಂತರ ಅವರು ಪೊಲೀಸ್ ದೂರು ನೀಡಿದ್ದಾರೆ.
ಆರೋಪಿ ಶ್ರೀಧರ ಕೃಷ್ಣಾ ಕಾಣಕೋಣಕರ ಸಹ ಅದೇ ಊರಿನವನಾಗಿದ್ದು, ಹೋಂ ಗಾರ್ಡ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ.