ಹೊನ್ನಾವರ: ಬಾಂದೇಹಳ್ಳದ ಸಮೀಪದ ಶಾಂತಿನಗರದಲ್ಲಿ ಮನೆಗೆ ಆಕಸ್ಮಿಕ ಬೆಂಕಿ ತಗುಲಿದೆ.
ಜ್ಯೋತಿ ಮಾರ್ಟಿನ್ ಜೋನ್ಸಾಲಿಸ್ ಎಂಬಾತರ ಮನೆಗೆ ಬೆಂಕಿ ತಾಗಿದೆ. ಅವರು ಮನೆಯಲ್ಲಿ ಒಬ್ಬರೆ ವಾಸವಾಗಿದ್ದು, ನಿತ್ಯದ ರೂಡಿಯಂತೆ ಚರ್ಚಿಗೆ ಹೋಗಿದ್ದರು. ಮನೆಗೆ ಮರಳಿದಾಗ ಬೆಂಕಿ ಕಂಡ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ಕ-ಪಕ್ಕದ ಮನೆಯವರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ.
S News Digitel
ಅಳವೆಯಲ್ಲಿ ಸಿಕ್ಕಿಬಿದ್ದ ಬೋಟು
ಹೊನ್ನಾವರ: ಕಾಸರಕೋಡ ಟೊಂಕಾ ಸಮೀಪದಲ್ಲಿ ಮೀನುಗಾರಿಕೆ ತೆರಳಿ ಬರುತ್ತಿದ್ದ ಹಸಿನಾ ಅನ್ಸಾರ್ ಮಾಲೀಕತ್ವದ ಸಿ ಅರೇಬಿಯನ್ ಬೋಟ್ ಅಳವೆಯ ಸಮೀಪ ಸಿಕ್ಕಿ ಬಿದ್ದಿದ್ದು, ಬೋಟಿನಲ್ಲಿದ್ದ ಕಾರ್ಮಿಕರು ದಡ ಸೇರಿ ಜೀವ ಉಳಿಸಿಕೊಂಡಿದ್ದಾರೆ.
ಆಳ ಸಮುದ್ರದಿಂದ ಮೀನುಗಾರಿಕೆ ನಡೆಸಿ ಬೋಟು ಮರಳುತ್ತಿತ್ತು. 35 ಕಾರ್ಮಿಕರು ಈ ಬೋಟಿನಲ್ಲಿದ್ದರು. ಮೀನುಗಾರರಿಗೆ ಅಳವೆ ಸಮಸ್ಯೆ ಈ ಹಿಂದಿನಿ0ದಲೂ ಕಾಡುತ್ತಿದೆ. ಪ್ರತಿ ವರ್ಷವು ಬೋಟ್ಗಳು ಈ ಅಳವೆ ಪ್ರದೇಶದಲ್ಲಿ ಮುಳುಗಿ ಅಪಾರ ನಷ್ಟ ಉಂಟಾಗುತ್ತಿದೆ.
ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ
ದಾoಡೇಲಿ: ವಿದ್ಯುತ್ ಬಿಲ್ ವಸೂಲಿಗೆ ಗಾಂಧಿ ನಗರಕ್ಕೆ ತೆರಳಿದ್ದ ಹೆಸ್ಕಾಂ ಸಿಬ್ಬಂದಿ ನಜೀರ ಅಹ್ಮದ್ ಹಟ್ಟಿಹೊಳಿ ಅವರ ಮೇಲೆ ಹಲ್ಲೆ ನಡೆದಿದೆ.
ಅವರು ವಿದ್ಯುತ್ ಬಿಲ್ ವಸೂಲಿಗೆ ಗಾಂಧಿನಗರದ ಮನೆಯೊಂದಕ್ಕೆ ಹೋಗಿದ್ದರು. ಆಗ ಮನೆಯವರು ಅವಾಚ್ಯ ಶಬ್ದಗಳಿಂದ ಬೈದು ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ಈ ಬಗ್ಗೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
S News Digitel