ಮುಂಡಗೋಡ: 1 ರೂಪಾಯಿ ಕಟ್ಟಿದರೆ 80 ರೂ ನೀಡುವುದಾಗಿ ಆಮೀಷ ಒಡ್ಡಿ ಜೂಜಾಟ ನಡೆಸುತ್ತಿದ್ದ ಮೂರು ಕಡೆ ಪೊಲೀಸರು ದಾಳಿ ನಡೆಸಿದ್ದಾರೆ.
ಬಂಕಾಪುರ ರಸ್ತೆಯ ವಿನಾಯಕ ಶಂಕರ್ ಕಲಾಲ್ (34) ಎಂಬಾತ ಅಗಸ್ಟ 31ರ ಮಧ್ಯಾಹ್ನ ಕಂಬಾರ ಕಟ್ಟಿ ಬಸ್ ನಿಲ್ದಾಣದ ಎದುರು ಜೂಜಾಟ ನಡೆಸುತ್ತಿದ್ದ. ಇನ್ನೊಬ್ಬರಿಗೆ ನಷ್ಟ ಆಗುವ ರೀತಿಯಲ್ಲಿ ಆತ ಹಣ ಕಟ್ಟಿಸಿಕೊಂಡಿದ್ದ. ಆತನ ಮೇಲೆ ದಾಳಿ ನಡೆಸಿದ ಪಿಎಸ್ಐ ಪರಶುರಾಮ ಮಿರ್ಜಗಿ 350ರೂ ಹಣದೊಂದಿಗೆ ಬಿಳಿ ಚೀಟಿ ಹಾಗೂ ಅಂಕಿ-ಸAಖ್ಯೆಗಳನ್ನು ಬರೆಯುತ್ತಿದ್ದ ಬಾಲ್ಪೆನ್ ವಶಕ್ಕೆ ಪಡೆದಿದ್ದಾರೆ.
ಇದರೊಂದಿಗೆ ಬೆಂಡಗೇರಿ ಪೆಟ್ರೋಲ್ ಬಂಕ್ ಬಳಿ ಚಡವಳ್ಳಿಯ ಸಂಜಯ ನಾರಾಯಣ ಪಾಟೇಲ (42) ಎಂಬಾತ ಸಹ ಮಟ್ಕಾ ಆಟ ಆಡಿಸುತ್ತಿದ್ದ. ಆ ಭಾಗದಲ್ಲಿ ಓಡಾಡುವ ಜನರನ್ನು ಕರೆದು ಅವರಿಂದ ಆತ ಹಣ ಹೂಡಿಕೆ ಮಾಡುವಂತೆ ಪೀಡಿಸುತ್ತಿದ್ದ. ಅಲ್ಲಿ ದಾಳಿ ನಡೆಸಿದ ಪೊಲೀಸರಿಗೆ 420ರೂ ಜೊತೆ ಬಿಳಿ ಹಾಳೆ ಹಾಗೂ ಬಾಲ್ಪೆನ್ ಸಿಕ್ಕಿದೆ.
ಕಾಸು ಕೊಡಲ್ಲ ಎಂದ ಓಸಿ ಬುಕ್ಕಿ!
ಕಾತೂರಿನ ಪಕೀರಪ್ಪ ಯಲ್ಲಪ್ಪ ವಾಲ್ಮಿಕಿ (48) ಎಂಬಾತ ಚಿಪಗೇರಿ ಕ್ರಾಸಿನ ಬಳಿ ಮಟ್ಕಾ ದಂತೆ ನಡೆಸುತ್ತಿದ್ದು, ಆತನ ಮೇಲೆ ಸಹ ಪೊಲೀಸರು ದಾಳಿ ನಡೆಸಿದರು. ಆಗ 330ರೂ ಸಿಕ್ಕಿದ್ದು ಆ ಹಣವನ್ನು ಆತ ಪೊಲೀಸರಿಗೆ ಒಪ್ಪಿಸಲು ಸಿದ್ಧವಿರಲಿಲ್ಲ. ಸಾಕಷ್ಟು ಪ್ರಯತ್ನ ನಡೆಸಿದರೂ ಆತ ಹಣವನ್ನು ಮಾತ್ರ ಕೊಟ್ಟಿಲ್ಲ. ಕೊನೆಗೆ ಪೊಲೀಸರೇ ಸುಸ್ತಾಗಿ ಆ ಹಣವನ್ನು ಆತನಿಗೆ ಬಿಟ್ಟು, ಬಿಳಿ ಚೀಟಿ ಹಾಗೂ ಬಾಲ್ಪೆನ್ ಜೊತೆ ಪೊಲೀಸ್ ಠಾಣೆಗೆ ಮರಳಿದರು. ಪಿಎಸ್ಐ ರಂಗನಾಥ ನೀಲಮ್ಮನವರ ಈ ದಾಳಿ ನಡೆಸಿದ್ದರು.