ಭಟ್ಕಳ: ರಸ್ತೆಗೆ ಅಡ್ಡಲಾಗಿ ನಿಂತಿದ್ದ ಲಾರಿಗೆ ಬೈಕ್ ಗುದ್ದಿ ಶಿರಾಲಿ ಗುಡಿಹಿತ್ತಲುವಿನ ನಾರಾಯಣ ನಾಯ್ಕ (41) ಎಂಬಾತ ಸಾವನಪ್ಪಿದ್ದು, ಲಾರಿ ಚಾಲಕ ಜಾರ್ಖಂಡದ ಅನ್ಸಾರಿ ಮೊಹ್ಮದ್ ಸಫೀಕ್ ಹಾಗೂ ಸಾವನಪ್ಪಿದ ನಾರಾಯಣ ನಾಯ್ಕ ವಿರುದ್ಧ ರವೀಶ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ.
ಲಾರಿ ಅಡ್ಡ ನಿಂತಿರುವುದು ಹಾಗೂ ಬೈಕ್ ಚಾಲಕನ ನಿರ್ಲಕ್ಷ್ಯ ಎರಡೂ ಈ ಅಪಘಾತಕ್ಕೆ ಕಾರಣ ಎಂಬುದು ಹೆಸ್ಕಾಂ ಸಿಬ್ಬಂದಿಯೂ ಆಗಿರುವ ರವೀಶ ನಾಯ್ಕ ಅವರ ಆರೋಪ. ನಾರಾಯಣ ನಾಯ್ಕ ಅವರು ಶಿರಾಲಿಯಿಂದ ಹೊನ್ನಾವರ ಕಡೆ ಹೋಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಹಿಂದಿನಿoದ ಡಿಕ್ಕಿಯಾಗಿದೆ. ಅಗಸ್ಟ 31ರಂದು ಮುರುಡೇಶ್ವರದ SBI ಎದುರು ಈ ಅಪಘಾತ ನಡೆದಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ರವೀಶ ನಾಯ್ಕ ಪೊಲೀಸರಲ್ಲಿ ದೂರಿದ್ದಾರೆ.