ಶಿರಸಿ: ಅಡಿಕೆ ಬೆಳೆಗೆ ಮದ್ದು ಹೊಡೆದು 30 ದಿನ ಕಳೆದಿಲ್ಲ. ಆಗಲೇ ಕೊಳೆ ರೋಗದಿಂದ ಅಡಿಕೆ ಮಿಳ್ಳೆ ಉದುರುತ್ತಿದ್ದು, ಬೆಳೆಗಾರರಿಗೆ ನೆಮ್ಮದಿ ಹಾಳಾಗಿದ್ದು ರಾತ್ರಿ ನಿದ್ದೆ ಬರುತ್ತಿಲ್ಲ.
ನಿರಂತರವಾಗಿ ಸುರಿಯುವ ಮಳೆ ಆಗಾಗ ಇಣುಕುವ ಬಿಸಿಲಿ ಪ್ರಭಾವದಿಂದ ವ್ಯಾಪಕ ಪ್ರಮಾಣದಲ್ಲಿ ಕೊಳೆ ರೋಗ ಆವರಿಸಿದೆ. ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, `ತಮ್ಮ ಕಷ್ಟಗಳನ್ನು ದೂರ ಮಾಡು\’ ಎಂದು ಪ್ರಾರ್ಥಿಸಿ ಕೊಳಗಿಬೀಸ್ ಶ್ರೀ ಮಾರುತಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಲೋಕ ಕಲ್ಯಾಣಾರ್ಥ ಪ್ರತಿ ಗ್ರಾಮದಲ್ಲೂ ಧಾರ್ಮಿಕ ರುದ್ರ ಹೋಮ ನಡೆಸುವ ಬಗ್ಗೆ ಸೋಂದಾ ಸ್ವರ್ಣವಲ್ಲಿಯ ಗಂಗಾಧರೇAದ್ರ ಸರಸ್ವತಿ ಸ್ವಾಮೀಜಿ ಸಹ ಕರೆ ನೀಡಿದ್ದು, ಮಾರುತಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಕುಮಾರ ಭಟ್ಟ ಅವರ ಮಾರ್ಗದರ್ಶನದಲ್ಲಿ ಶ್ರಾವಣ ಶನಿವಾರ ರುದ್ರ ಹೋಮ ನಡೆಯಿತು. ಈ ವೇಳೆ ಭಾಗವಹಿಸಿದ ಅನೇಕರು ಕೊಳೆರೋಗದಿಂದ ಅಡಿಕೆ ಬೆಳೆ ಕಾಪಾಡುವಂತೆ ಪ್ರಾರ್ಥಿಸಿದರು.