
ಸಿದ್ದಾಪುರ: ಭಟ್ಕಳದ ಖಸಾಯಿಖಾನೆಗೆ ತೆರಳುತ್ತಿದ್ದ ನಾಲ್ಕು ಹೋರಿಗಳನ್ನು ಪೊಲೀಸರು ರಕ್ಷಿಸಿದ್ದಾರೆ.
ದೊಡ್ಮನೆಯ ಕೇಶವ ಗೌಡ ಹಾಗೂ ಕೋಡಿಗದ್ದೆಯ ಮಹೇಶ ಮರಾಠಿ ಎಂಬಾತರು ಪಿಕ್ಅಪ್ ವಾಹನದ ಮೂಲಕ ಹೋರಿಗಳನ್ನು ಸಾಗಿಸುತ್ತಿದ್ದರು. ಚಂದ್ರಘಟಕಿ, ಮೆಣಸಿ – ಮಾವಿನಗುಂಡಿ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದರು. ವಾಹನ ತಪಾಸಣೆ ನಡೆಸಿದ ನಂತರ ಹೋರಿಗಳನ್ನು ರಕ್ಷಿಸಿ, ಆರೋಪಿತರನ್ನು ಬಂಧಿಸಿದ್ದಾರೆ.