`ಶಿಶು ಮಂದಿರ, ಬಾಲ ಮಂದಿರ ಹಾಗೂ ವಿವಿಧ ಶಾಲೆಗಳಲ್ಲಿ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕರಣ ವರದಿಯಾಗುತ್ತಿದ್ದು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ನಡವಳಿಕೆ ಹಾಗೂ ವರ್ತನೆ ಬಗ್ಗೆ ಪೊಲೀಸ್ ಸಿಬ್ಬಂದಿ ಗಮನಿಸುತ್ತಿರಬೇಕು\’ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ ಹೇಳಿದ್ದಾರೆ.
ಭಾನುವಾರ ಕಾರವಾರದ ಜಿಲ್ಲಾ ಪೊಲೀಸ್ ಅಧಿಕ್ಷಕರ ಸಭಾಭವನದಲ್ಲಿ ನಡೆದ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮತ್ತು ವಿಶೇಷ ಬಾಲ ಪರಾಧಿ ಪೊಲೀಸ್ ಘಟಕದ ಸಂವೇಧನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಮಕ್ಕಳ ಸಮಸ್ಯೆಗಳ ಬಗ್ಗೆ ಪೊಲೀಸರಿಗೆ ಅರಿವಿರಬೇಕು. ಮಕ್ಕಳ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಹೆಚ್ಚಿದೆ\’ ಎಂದರು.
`ಮಕ್ಕಳ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಬಹುಮುಖ್ಯವಾಗಿದ್ದು, ಪೊಲೀಸರು ಆಪ್ತ ಸಮಾಲೋಚನೆ ಮೂಲಕ ಮಕ್ಕಳ ಮನಸ್ಸು ಗೆಲ್ಲಬೇಕು\’ ಎಂದು ಹೇಳಿದರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಗಣೇಶ ಪಡಿಯಾರ ಮಾತನಾಡಿ `ಮಕ್ಕಳನ್ನು ಮಕ್ಕಳಂತೆ ನೋಡುವ ಅಲೋಚನೆ ನಮ್ಮಲ್ಲಿ ಬೆಳಸಿಕೊಳ್ಳಬೇಕು. ಮಕ್ಕಳ ಆರೈಕೆ, ರಕ್ಷಣೆ ನಮ್ಮಲ್ಲರ ಜವಾಬ್ದಾರಿ\’ ಎಂದರು. `ಬಾಲ ಅಪರಾಧಿ ಮಕ್ಕಳಿಗೆ ಅರೈಕೆಯ ಜೊತೆಗೆ ಅವರಿಗೆ ಮೂಲಸೌಕರ್ಯ ಮತ್ತು ಪುನರ್ವಸತಿ ಸೌಕರ್ಯ, ಶಿಕ್ಷಣ, ವೃತಿಪರ ತರಬೇತಿ, ಸಮಲೋಚನೆಗೆ ಅವಕಾಶ ನೀಡಬೇಕು. ಮಕ್ಕಳ ಹಕ್ಕುಗಳ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಬೇಕು\’ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಧನುರಾಜ ಎಸ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಇದ್ದರು.