ಯಲ್ಲಾಪುರ: ಎಪಿಎಂಸಿ ಆವಾರದಲ್ಲಿ ಭಾನುವಾರ `ಸಸ್ಯ ಸಂಭ್ರಮ\’ ನಡೆದಿದ್ದು ಉತ್ತಮ ಗಿಡಗಳ ಆರೈಕೆ ಮಾಡಿದ ಗೀತಾ ಭಟ್ ಆನಗೋಡ, ಶ್ವೇತಾ ಗೇರಗದ್ದೆ, ಪ್ರೇಮ ಹೆಗ್ಗಾರ್ ಹಾಗೂ ರಶ್ಮಿ ಹೆಗಡೆ ಕುಂಬ್ರಿ ಅವರಿಗೆ ಸಂಘಟಕರು ಬಹುಮಾನ ನೀಡಿ ಗೌರವಿಸಿದರು.
ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಹಾಗೂ ಪ್ರಮುಖರಾದ ವಿ ಎಸ್ ಭಟ್ಟ, ಶಾಂತಲಾ ಹೆಗಡೆ ಬಹುಮಾನ ವಿಜೇತರನ್ನು ಘೋಷಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ-ಸಖಿ ಪ್ರಶಸ್ತಿ ವಿಜೇತೆ ಶ್ರೀಲತಾ ರಾಜೀವ `ಪೃಕೃತಿ ಮೇಲಿನ ಪ್ರೀತಿ, ಗಿಡಗಳ ಆರೈಕೆಯಿಂದ ಯಶಸ್ಸು ಖಚಿತ.ಪೃಕೃತಿಯ ನಡುವೆ ಬದುಕುವ ನಾವು ಇಲ್ಲಿನ ಗಿಡ-ಮರಗಳನ್ನು ಆರಾಧಿಸಿದಾಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯ\’ ಎಂದು ಅಭಿಪ್ರಾಯಪಟ್ಟರು. `ಮಹಿಳೆಯರು ಶ್ರದ್ಧೆಯಿಂದ ಕೃಷಿ ಗಿಡಗಳನ್ನು ನಮ್ಮ ನಿತ್ಯದ ಕೆಲಸದಲ್ಲಿಯೂ ಬೆಳೆಸಿದರೆ ಅದು ಜೀವನದ ಸಾಧನೆಗೆ ಕಾರಣವಾಗುತ್ತದೆ\’ ಎಂದರು.
ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ಮಾತನಾಡಿ `ಪ್ರತಿಯೊಬ್ಬರು ಗಿಡ ನೆಟ್ಟು ಬೆಳೆಸುವ ಮಹತ್ವ ಅರಿಯಬೇಕು\’ ಎಂದು ಕರೆ ನೀಡಿದರು. ಸಾಧಕ ಮಹಿಳೆ ಗಿರಿಜಾ ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಕವಿತಾ ಬೋಳುಗುಡ್ಡೆ ಸನ್ಮಾನ ಪತ್ರ ವಾಚಿಸಿದರು. ಗಾಯತ್ರಿ ಬೋಳುಗುಡ್ಡೆ ಸ್ವಾಗತಿಸಿದರು. ಜಾನವಿ ಮಣ್ಣಮನೆ ಪ್ರಸ್ತಾಪಿಸಿದರು. ಸಂಧ್ಯಾ ಕೊಂಡದಕುಳಿ ನಿರ್ವಹಿಸಿದರು.
ಮಹಿಳೆಯರ ಮುಖ್ಯಸ್ಥಿಕೆಯಲ್ಲಿ ನಡೆದ ಸಸ್ಯ ಸಂಭ್ರಮದಲ್ಲಿ ಬಗೆ ಬಗೆಯ ಗಿಡಗಳು ಗಮನ ಸೆಳೆದವು. ಆದರೆ, ಬಹುತೇಕರು `ನಮಗೆ ಗೊತ್ತೇ ಆಗಲಿಲ್ಲ. ನಾವು ಭಾಗವಹಿಸುತ್ತಿದ್ದೇವು\’ ಎಂದು ಪರಿತಪಿಸಿದರು.