ಅಂಕೋಲಾ: ಹೋಟೆಲ್ ಕೆಲಸ ಮಾಡಿಕೊಂಡಿದ್ದ ಕಂತ್ರಿಯ ನಾಗರಾಜ ವೆಂಕಟೇಶ ಶೆಟ್ಟಿ (65) ಅಸ್ತಮಾ ಖಾಯಿಲೆಯಿಂದ ಸಾವನಪ್ಪಿದ್ದಾರೆ.
ಕಳೆದ ಒಂದುವರೆ ವರ್ಷದ ಹಿಂದೆ ಅವರಿಗೆ ಅಸ್ತಮಾ ಕಾಣಿಸಿಕೊಂಡಿತ್ತು. ಅದಾದ ನಂತರ ಅವರು ಅನಾರೋಗ್ಯದ ಹಿನ್ನಲೆ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗೆ ದಾಖಲಾದ ಅವರು ಅಲ್ಲಿನ ಚಿಕಿತ್ಸೆ ಹಾಗೂ ಔಷಧ ಸ್ವೀಕರಿಸಿದ್ದರು. ಸೆ 13ರಂದು ಮನೆಯ ಮುಂದಿನ ಕೋಣೆಯಲ್ಲಿ ಮಲಗಿದ್ದ ಅವರು ಎಷ್ಟು ಕರೆದರೂ ಏಳಲಿಲ್ಲ. ಅವರ ಮಗ ಹರ್ಷವರ್ಧನ್ ಮನೆ ಒಳಗೆ ಹೋಗಿ ಮಲಗುವಂತೆ ಸೂಚಿಸಿದ್ದು, ಸ್ಪಂದಿಸದ ಕಾರಣ ಮೈ ಮುಟ್ಟಿ ಎಬ್ಬಿಸುವ ಪ್ರಯತ್ನ ನಡೆಸಿದರು. ಆಗ ನಾಗರಾಜ ಶೆಟ್ಟಿ ಉಸಿರಾಡದೇ ಇರುವುದು ಗಮನಕ್ಕೆ ಬಂದಿದ್ದು, ತಕ್ಷಣ ಆಂಬುಲೈನ್ಸ ತರಿಸಿ ಆಸ್ಪತ್ರೆಗೆ ದಾಖಲಿಸಿದರು.
ಆದರೆ, ಅಲ್ಲಿನ ವೈದ್ಯರು ಈಗಾಗಲೇ ನಾಗರಾಜ ಶೆಟ್ಟಿ ಸಾವನಪ್ಪಿರುವುದನ್ನು ಖಚಿತಪಡಿಸಿದರು.