ಅಂಕೋಲಾ: ಬೈಕಿಗೆ ಅಡ್ಡ ಬಂದ ನಾಯಿಗೆ ಗುದ್ದುವುದನ್ನು ತಪ್ಪಿಸುವ ಬರದಲ್ಲಿ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದ ಪ್ರಕಾಶ ಸುಭಾಷ ತಳ್ಳೇಕರ್ (53) ಸಾವನಪ್ಪಿದ್ದಾರೆ.
ಹೊಸಗದ್ದೆ ಜನತಾ ಕಾಲೋನಿಯ ಪ್ರಕಾಶ ಸುಭಾಷ ತಳ್ಳೇಕರ್ (53) ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಅಂಕೋಲಾ ಪಟ್ಟಣದಲ್ಲಿ ಅವರ ಅಂಗಡಿಯಿದ್ದು, ಸೆ 11ರಂದು ಜೈಹಿಂದ್ ಸರ್ಕಲ್ ಮಾರ್ಗವಾಗಿ ಲೈಬ್ರೆರಿ ಕ್ರಾಸಿನ ಕಡೆ ಬೈಕಿನಲ್ಲಿ ಹೋಗುತ್ತಿದ್ದಾಗ ಬೀದಿ ನಾಯಿ ಅಡ್ಡ ಬಂದಿತ್ತು. ಬೈಕ್ ಅದಕ್ಕೆ ಗುದ್ದುವುದನ್ನು ತಪ್ಪಿಸುವುದಕ್ಕಾಗಿ ಅರಣ್ಯ ಇಲಾಖೆ ಕಚೇರಿ ಕಡೆ ಬೈಕ್ ವಾಲಿಸಿದ್ದು, ಅಲ್ಲಿಯೇ ಬಿದ್ದು ಪ್ರಕಾಶ ಗಾಯಗೊಂಡಿದ್ದರು.
ತಲೆ ಹಾಗೂ ಮೈಗೆ ಪೆಟ್ಟು ಮಾಡಿಕೊಂಡಿದ್ದ ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಮೊದಲು ಅಂಕೋಲಾದ ತಾಲೂಕು ಆಸ್ಪತ್ರೆಗೆ ದಾಖಲಿಸಿ ನಂತರ ಅಲ್ಲಿಂದ ಕಾರವಾರ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಅದಾದ ಮೇಲೆ ಮಂಗಳೂರಿನ ತೇಜಸ್ವಿನಿ ಹಾಗೂ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಲಾಗಿತ್ತು. ಅದಾದ ನಂತರ ಮತ್ತೆ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಸೆ 14ರಂದು ಅವರು ಕೊನೆ ಉಸಿರೆಳೆದರು.