ಶಿರಸಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ವಿಡಿಯೋಗೆ ಅಸಬಂದ್ಧ ಬರಹ ಬರೆದಿದ್ದ ಫೇಸ್ಬುಕ್ ಖಾತೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಕಮೆಂಟ್ ಪೋಸ್ಟ್ ಮಾಡಿದ ಖಾತೆ ನಕಲಿ ಎಂಬoತಿದ್ದು, , ಪ್ರಕರಣ ದಾಖಲಾದ ನಂತರವೂ ಬರಹ ಡಿಲಿಟ್ ಆಗಿಲ್ಲ.
ರಾಮನಬೈಲಿನ ನಾಗೇಶ್ವರ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿದ್ದ ಗಣೇಶ ವಿಗ್ರಹ ವಿಸರ್ಜನೆ ನಡೆಯುತ್ತಿತ್ತು. ರಾಮನಬೈಲ್ ದೊಡ್ಡ ಮಸೀದಿ ಮುಂದೆ ಈ ಮೆರವಣಿಗೆ ಹೊರಟಾಗ ಅಲ್ಲಿನ ಫಾರುಕ್ ಶೇಖ್ ನೇತ್ರತ್ವದಲ್ಲಿ ಮುಸ್ಲಿಂ ಸಮುದಾಯದವರು ನೀರು ಹಾಗೂ ಸಿಹಿ ಹಂಚುತ್ತಿದ್ದರು. ಈ ವಿಡಿಯೋ `ಶಿರಸಿ ಕನ್ನಡಿಗ\’ ಎಂಬ ಫೇಸ್ಬುಕ್ ಪುಟದಲ್ಲಿ ಪ್ರಕಟವಾಗಿದೆ. ಇದಕ್ಕೆ ಅನೇಕರು ಉತ್ತಮ ರೀತಿಯಲ್ಲಿ ಕಮೆಂಟ್ ಮಾಡಿದ್ದು, ನಂದಿಶ ನಂದಿತಾ ಎಂಬ ಹೆಸರಿನ ಖಾತೆಯಿಂದ ಕೋಮು ಸೌಹಾರ್ದತೆ ಕದಡುವ ರೀತಿ ಬರಹ ಪ್ರಕಟವಾಗಿದೆ.
ಎರಡು ಗುಂಪುಗಳ ನಡುವೆ ಘರ್ಷಣೆಗೆ ಪ್ರಚೋದಿಸುವುದಕ್ಕಾಗಿ ಈ ಕಮೆಂಟ್ ಮಾಡಿದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಅರುಣ ಮಾನಪ್ಪ ಲಮಾಣಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಸುಮೋಟೋ ಪ್ರಕರಣ ದಾಖಲಾಗಿದೆ.