ಭಟ್ಕಳ: ಕಲಘಟಗಿ ಗ್ರಾ ಪಂ ಅಧ್ಯಕ್ಷ ಬಸವರಾಜ ನೇಸರಗಿ ತಮ್ಮ ಕುಟುಂಬದ ಜೊತೆ ಧರ್ಮಸ್ಥಳ ಪ್ರವಾಸಕ್ಕೆ ಹೊರಟಿದ್ದು, ರಾತ್ರಿ ವಸತಿ ಹೂಡಿದ ಪ್ರದೇಶದಲ್ಲಿ ಅವರ ಪತ್ನಿಯ ಚಿನ್ನದ ಸರ ಹಾಗೂ 5 ಸಾವಿರ ರೂ ಹಣ ಕಳ್ಳತನವಾಗಿದೆ.
ಸೆ 13ರಂದು ಬಸವರಾಜ ಅವರು ಪತ್ನಿ ಮಧುರಿ, ಅಕ್ಕ ಗಿರಿಜಾ ಹಾಗೂ ಅಕ್ಕನ ಮಗಳು ಪೂಜಾ ಜೊತೆ ಧರ್ಮಸ್ಥಳಕ್ಕೆ ಹೊರಟಿದ್ದರು. ಗ್ರಾ ಪಂ ಸಿಬ್ಬಂದಿ ಮೈಲಾರ ಗೌಡ ಪಾಟೀಲ್ ಸಹ ಅವರಿಗೆ ಜೊತೆಯಾಗಿದ್ದ. ರಾತ್ರಿಯಾದ ಕಾರಣ ಮುರುಡೇಶ್ವರದ ಇಂದ್ರಪ್ರಸ್ಥ ಹೋಟೆಲ್\’ನಲ್ಲಿ ಈ ಕುಟುಂಬದವರು ಎರಡು ಪ್ರತ್ಯೇಕ ರೂಂ ಪಡೆದಿದ್ದರು.
ಒಂದೇ ಕುಟುಂಬದ ಎಲ್ಲರೂ ಒಂದು ಕೋಣೆಯಲ್ಲಿದ್ದರೆ ಮೈಲಾರ ಗೌಡ ಇನ್ನೊಂದು ಕೋಣೆಯಲ್ಲಿದ್ದ. ಹೀಗಿರುವಾಗ ಮಧುರಿ ಅವರು ತಮ್ಮ ಕತ್ತಿನಲ್ಲಿದ್ದ ಚಿನ್ನದ ತಾಳಿಯನ್ನು ವ್ಯಾನಿಟಿ ಬಾಗಿನಲ್ಲಿರಿಸಿ ಮಲಗಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಬ್ಯಾಗಿನಲ್ಲಿದ್ದ ತಾಳಿ ಸಿಗಲಿಲ್ಲ. ಜೊತೆಗೆ ಅಲ್ಲಿದ್ದ 5 ಸಾವಿರ ರೂ ಹಣ ಸಹ ಕಳ್ಳತನವಾಗಿತ್ತು.
2.20 ಲಕ್ಷ ರೂ ಮೌಲ್ಯದ ತಾಳಿ ಹಾಗೂ ಹಣ ಕಳ್ಳತನವಾದ ಬಗ್ಗೆ ಬಸವರಾಜ ನೇಸರಗಿ ಪೊಲೀಸ್ ದೂರು ನೀಡಿದ್ದಾರೆ.