ಕಾರವಾರ: ಸೈಕಲ್ ಮೇಲೆ ಸಂಚರಿಸುತ್ತಿದ್ದ ನರಸಿಂಹ ನೀಲಪ್ಪ ನಾಯ್ಕ (75) ಎಂಬಾತರಿಗೆ ಕಾರು ಗುದ್ದಿದ ಕಾರಣ ಅವರು ಸಾವನಪ್ಪಿದ್ದಾರೆ.
ಬಿಣಗಾದ ರಾಮನಗರದವರಾದ ನರಸಿಂಹ ನಾಯ್ಕ ಅವರು ಈ ವಯಸ್ಸಿನಲ್ಲಿ ಸಹ ಸೆಕ್ಯುರಿಟಿ ಗಾರ್ಡ ಆಗಿ ಕೆಲಸ ಮಾಡುತ್ತಿದ್ದರು. ನಿತ್ಯ ಸೈಕಲ್ ಮೇಲೆ ಸಂಚರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಸೆ 14ರಂದು ಮಧ್ಯಾಹ್ನ ಬಿಣಗಾದಿಂದ ಕಾರವಾರ ಕಡೆ ಹೋಗುತ್ತಿದ್ದ ಅವರು ಸೋಮನಾಥ ಐಟಿಐ ಕಾಲೇಜು ಕಡೆ ತೆರಳುತ್ತಿದ್ದಾಗ ಅಂಕೋಲಾ ತೆಂಗಣಗೇರಿಯ ಮಾರುತಿ ಶೆಟ್ಟಿ ಅವರ ಕಾರು ಸೈಕಲಿಗೆ ಗುದ್ದಿದೆ.
ಪರಿಣಾಮ ನರಸಿಂಹ ನಾಯ್ಕ ಅವರ ತಲೆಗೆ ಪೆಟ್ಟಾಗಿತ್ತು. ಮೂಗಿನಿಂದ ರಕ್ತ ಸೋರುತ್ತಿತ್ತು. ಗೋವಾದ ಬಾಂಬೋಲಿ ಆಸ್ಪತ್ರೆಗೆ ಸಾಗಿಸುವಾಗ ಸಾವನಪ್ಪಿದರು.