ಸಿದ್ದಾಪುರ: ಪಟ್ಟಣದ ಶಂಕರಮಠದ ಸಭಾಭವನದಲ್ಲಿ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶನಗೊಂಡ ಕರ್ಣಪರ್ವ ಹಾಗೂ ಮಾಗದ ವಧೆ ಯಕ್ಷಗಾನ ಮೆಚ್ಚುಗೆಗಳಿಸಿತು.
ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ. ರಾಘವೇಂದ್ರ ಆಚಾರ್ಯ ಜನ್ಸಾಲೆ, ಸುನೀಲ್ ಭಂಡಾರಿ, ಸುಜನ್ ಹಾಲಾಡಿ ಸಹಕರಿಸಿದರು. ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ವಿಶ್ವನಾಥ ಹೆನ್ನಾಬೈಲ್, ವಿನಯ ಬೇರೊಳ್ಳಿ, ನಿರಂಜನ ಜಾಗನಳ್ಳಿ, ಉದಯ ಹೆಗಡೆ ಕಡಬಾಳ, ಕಾರ್ತಿಕ ಚಿಟ್ಟಾಣಿ, ಸುಧೀರ್ ಉಪ್ಪೂರು, ರವೀಂದ್ರ ದೇವಾಡಿಗ, ಪುರಂದರ ಮೂಡ್ಕಣಿ, ಸಂತೋಷ ಹೆಂಗವಳ್ಳಿ,ಪವನ ಸಾನ್ಮನೆ ಪಾತ್ರ ನಿರ್ವಹಿಸಿದರು.
ಸೆ 17ಕ್ಕೆ ಸುಸ್ಥಿರ ಇಂಧನ ಕಾರ್ಯಾಗಾರ
ಶಿರಸಿ: ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸೆ 17ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಎಪಿಎಂಸಿ ಯಾರ್ಡ್ನ ಕದಂಬ ಮಾರ್ಕೆಟಿಂಗ್ನಲ್ಲಿ `ಮಲೆನಾಡು ಸುಸ್ಥಿರ ಇಂಧನ ಅಭಿವೃದ್ಧಿ\’ ಕಾರ್ಯಾಗಾರ ನಡೆಯಲಿದೆ.
ರಾಜ್ಯ ಸರ್ಕಾರದ ಜೈವಿಕ ಇಂಧನ ಅಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಾಗಾರದಲ್ಲಿ ಸೋಲಾರ್ ವಾಹನ – ಉಪಕರಣಗಳ ಹಾಗೂ ಜೈವಿಕ ಇಂಧನ – ಉಪ ಉತ್ಪನ್ನಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ನವೀಕರಿಸಬಹುದಾದ ಇಂಧನ ಕುರಿತ ತಜ್ಞ ವಿಚಾರಗೋಷ್ಟಿ ಏರ್ಪಡಿಸಲಾಗಿದೆ. ಈಗಾಗಲೇ ಸುಸ್ಥಿರ ಇಂಧನದ ಕುರಿತಾದ ನವೀನ ಪ್ರಯೋಗ ನಡೆಸಿರುವ ಪ್ರಗತಿಪರ ರೈತರು, ಇತರ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಕಾರ್ಯಾಗಾರದ ಕುರಿತ ಹೆಚ್ಚಿನ ಮಾಹಿತಿಗಾಗಿ ಕದಂಬ ಮಾರ್ಕೆಟಿಂಗ್ ಶಿರಸಿ ದೂ. 08384233163ಗೆ ಕರೆ ಮಾಡಿ.
ಪೃಕೃತಿಯ ಸೌಂದರ್ಯ ಉಳಿಸಿ.. ಆಹ್ವಾದಿಸಿ!
`ಉತ್ತರ ಕನ್ನಡ ಜಿಲ್ಲೆ ಸುಂದರ ಪ್ರಕೃತಿಯ ಸೌಂದರ್ಯವನ್ನು ಹೊಂದಿದ್ದು, ಶೇ.82 ರಷ್ಟು ಅರಣ್ಯ ಪ್ರದೇಶದಿಂದ ಕೂಡಿದೆ. ಇಂತಹ ಪ್ರಕೃತಿಯನ್ನು ಹಾಗೂ ಕಡಲ ತೀರ ಪ್ರದೇಶಗಳನ್ನು ಮಲೀನಗೊಳಿಸದೇ ಸುಂದರವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ \’ ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಸ್ವಚ್ಚತೆಯೇ ಸೇವೆ ಪಾಕ್ಷಿಕ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. `ಪ್ರತಿಯೊಬ್ಬರು ಸ್ವ ಪ್ರೇರಣೆಯಿಂದ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚತೆ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು\’ ಎಂದರು. `ಜಿಲ್ಲೆಯಾದ್ಯಂತ ಸೆಪ್ಟಂಬರ್ 17ರಿಂದ ಆಯೋಜಿಸುವ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತಂತೆ ವಿವಿಧ ಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಸ್ವಚ್ಛತೆಯೇ ಸೇವಾ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು\’ ಎಂದರು.
ಸೆ.17ಕ್ಕೆ ಬೃಹತ್ ಸ್ವಚ್ಛತಾ ಶ್ರಮದಾನ
ಕಾರವಾರ: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಉತ್ತರ ಕನ್ನಡ ಹಾಗೂ ನಗರಸಭೆ ಕಾರವಾರ ವತಿಯಿಂದ \’ಸ್ವಚ್ಛತಾ ಹಿ ಸೇವಾ/ ಸ್ವಚ್ಛತೆಯೇ ಸೇವೆ\’ -2024 ರ ಆಂದೋಲನದ ಅಂಗವಾಗಿ ಸೆ.17 ರಂದು ಬೆಳಿಗ್ಗೆ 7.30 ಕ್ಕೆ ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಬೃಹತ್ ಸ್ವಚ್ಛತಾ ಶ್ರಮದಾನವನ್ನು ಹಮ್ಮಿಕೊಳ್ಳಲಾಗಿದೆ.
ಗಾಂಧೀಜಿ ಅವರ ಧೈಯವಾಕ್ಯ \’ಸ್ವಚ್ಛತೆಯೇ ದೈವತ್ವ\’ ಎಂಬ ಕನಸನ್ನು ನನಸಾಗಿಸಲು ಸೆ.17 ರಿಂದ ಅ.2ರ ವರೆಗೆ 17 ದಿನಗಳ ವರೆಗೆ ಜಿಲ್ಲೆಯ ನಗರ ಮತ್ತು ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ \’ಸ್ವಚ್ಛತಾ ಹಿ ಸೇವಾ/ಸ್ವಚ್ಛತೆಯೇ ಸೇವೆ\’ ಎಂಬ ವಿಶೇಷ ಆಂದೋಲನದ ಅಂಗವಾಗಿ ಪ್ರತಿದಿನವೂ ಕೂಡ ಸ್ವಚ್ಛತೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸೆ.17 ರಂದು ಬೆಳಿಗ್ಗೆ 7.30 ಕ್ಕೆ ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಹಮ್ಮಿಕೊಂಡ ಬೃಹತ್ ಸ್ವಚ್ಛತಾ ಶ್ರಮದಾನದಲ್ಲಿ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು, ಶಾಲಾ,ಕಾಲೇಜು, NSS, ಸ್ಕೌಟ್ಸ್ ವಿದ್ಯಾರ್ಥಿಗಳು, ವಿವಿಧ ಸ್ವಯಂ ಸೇವಾ ಸಂಘಟನೆಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್, ಉತ್ತರ ಕನ್ನಡ ಹಾಗೂ ನಗರ ಸಭೆ ಕಾರವಾರ ಅವರ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಗಣೇಶ ಮೆರವಣಿಗೆಯಲ್ಲಿ ಡಿಜೆ ಬಳಕೆ: ಪೊಲೀಸರ ವರ್ತನೆಗೆ ಖಂಡನೆ
ಗಣೇಶ ಉತ್ಸವದ ವೇಳೆ ಡಿಜೆ ಬಳಸಿದವರ ವಿರುದ್ಧ ಪೊಲೀಸರು ಕ್ರಮ ಜರುಗಿಸುತ್ತಿರುವುದನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಖಂಡಿಸಿದ್ದಾರೆ.
ಕುಮಟಾ ಪುರಸಭೆ ವ್ಯಾಪ್ತಿಯ ಶಶಿಹಿತ್ತಲಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಸೆ 11ರಂದು ಗಣಪತಿ ಮೂರ್ತಿ ವಿಸರ್ಜನೆಗೆ ತೆಗೆದುಕೊಂಡು ಹೋಗುವಾಗ ಪೊಲೀಸರು ಡಿಜೆಯನ್ನು ವಶಕ್ಕೆ ಪಡೆದಿದ್ದರು. ಇದನ್ನು ಬಿಜೆಪಿಯ ಶಾಸಕ ದಿನಕರ ಶೆಟ್ಟಿ ಹಾಗೂ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಖಂಡಿಸಿದ್ದಾರೆ.
`ಪ್ರತಿಯೊAದು ಧಾರ್ಮಿಕ ಉತ್ಸವದಲ್ಲೂ ಡಿಜೆ ಬಳಸುವುದು ಸಾಮಾನ್ಯ. ಆದರೆ, ಮೀನುಗಾರರು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ಗಣಪನ ವಿಸರ್ಜನೆ ವೇಳೆ ಪೊಲೀಸರು ಕ್ರಮ ಜರುಗಿಸಿದ್ದು ಸರಿಯಲ್ಲ\’ ಎಂದು ದಿನಕರ ಶೆಟ್ಟಿ ಹೇಳಿದರು. `ಹಿಂದೂಗಳ ಉತ್ಸವದಲ್ಲಿ ಸಹ ಡಿಜೆ ಬಳಕೆಗೆ ಅವಕಾಶ ಕೊಡಬೇಕು. ಈ ಬಗ್ಗೆ ವಿಧಾನಸಭಾ ಅಧೀವೇಶನದಲ್ಲಿ ಮಾತನಾಡುವೆ\’ ಎಂದರು.
`ಸಮುದ್ರದಲ್ಲಿ ಯಾರಾದರೂ ಸಿಲುಕಿದಾಗ ಮೀನುಗಾರರು ಯಾವುದೇ ನಿರೀಕ್ಷೆಯಿಲ್ಲದೇ ಪೊಲೀಸರಿಗೆ ಸಹಾಯ ಮಾಡುತ್ತಾರೆ. ಆದರೆ, ಪೊಲೀಸರು ಮಾತ್ರ ಮೀನುಗಾರರ ಧಾರ್ಮಿಕತೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ\’ ಎಂದು ಸೂರಜ ನಾಯ್ಕ ಸೋನಿ ದೂರಿದರು.
ಭಕ್ತರಿಗೆ ಬಡಿಸಿದ ಶಾಸಕ ಹೆಬ್ಬಾರ್
ಯಲ್ಲಾಪುರ: ನೂತನ ನಗರದಲ್ಲಿ ಗಜಾನನೋತ್ಸವ ಸಮಿತಿ ಆಯೋಜಿಸಿದ ಅನ್ನದಾನದಲ್ಲಿ ಭಾಗವಹಿಸಿದ ಶಾಸಕ ಶಿವರಾಮ ಹೆಬ್ಬಾರ್ ಭಕ್ತರಿಗೆ ಊಟ ಬಡಿಸಿದರು. ಇದಕ್ಕೂ ಮುನ್ನ ದೇವರ ದರ್ಶನ ಪಡೆದು ಅವರು ಪ್ರಾರ್ಥಿಸಿದರು.