ಶಿರಸಿ: ಬನವಾಸಿಯ ಬುಗಡಿಕೊಪ್ಪಕ್ಕೆ ಬಂದಿದ್ದ ಕೊಲ್ಲಾಪುರದ ಅವಿನಾಶ ಬಾಲೋಸೋ ಕೋತ (32) ಎಂಬಾತ ನದಿಗೆ ಬಿದ್ದು ಸಾವನಪ್ಪಿದ್ದಾನೆ.
ಸೋಮವಾರ ಸಂಜೆ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಈತ ಬೈಕ್ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದು, ಅಲ್ಲಿಯೇ ಸಾವನಪ್ಪಿದ್ದಾನೆ. ಈ ವೇಳೆ ಆತ ಓಡಿಸುತ್ತಿದ್ದ ಬೈಕ್ ಸಹ ನದಿ ಪಾಲಾಗಿದೆ. ವಿಷಯ ತಿಳಿದ ಪೊಲೀಸರು ಮಾರಿಕಾಂಬಾ ಲೈಫ್ ಗಾರ್ಡ್ನ ಗೋಪಾಲ ಗೌಡ ಹಾಗೂ ಅವರ ತಂಡದಿoದ ಶೋಧ ಕಾರ್ಯ ನಡೆಸಿದರು. ಆಗ ನದಿಯಲ್ಲಿ ದೊರೆತ ಬೈಕ್ ಹಾಗೂ ಶವವನ್ನು ರಕ್ಷಣಾ ಸಿಬ್ಬಂದಿ ಮೇಲೆತ್ತಿದರು.