ಹಳೆ ಆಡಳಿತ ಮಂಡಳಿ ಹಾಗೂ ಹೊಸ ಆಡಳಿತ ಮಂಡಳಿ ಕಚ್ಚಾಟದಿಂದ ತೊಂದರೆ ಅನುಭವಿಸುತ್ತಿರುವವರು ಮಾತ್ರ ಬಡ ರೈತರು. ನಿತ್ಯ ಒಂದಿಲ್ಲೊ0ದು ಕಾರಣದಿಂದ ಟಿಎಸ್ಎಸ್ ವಿವಾದಕ್ಕೆ ಕಾರಣವಾಗುತ್ತಿದ್ದು, ಯಾರನ್ನು ನಂಬಬೇಕು? ಯಾರನ್ನು ಬಿಡಬೇಕು? ಎಂಬ ಗೊಂದಲ ಮುಂದುವರೆದಿದೆ.
ಶಿರಸಿ: ಟಿಎಸ್ಎಸ್ ಗೊಬ್ಬರ ಗೋದಾಮಿನ ಮೇಲೆ ಅಧಿಕಾರಿಗಳು ಮಂಗಳವಾರ ಸಂಜೆ ದಾಳಿ ನಡೆಸಿದ್ದಾರೆ. ಅಲ್ಲಿರುವ ಗೊಬ್ಬರದ ಚೀಲಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಅವಧಿಯಲ್ಲಿ ಕಳಪೆ ಗುಣಮಟ್ಟದ ಗೊಬ್ಬರವನ್ನು ಟಿಎಸ್ಎಸ್ ಸಿಬ್ಬಂದಿ ಅಡಗಿಸಿಟ್ಟಿದ್ದರು ಎಂದು ದೂರುದಾರ ರೈತರು ಆರೋಪಿಸಿದ್ದಾರೆ.
ಸೆ 10ರಂದು ಟಿಎಸ್ಎಸ್\’ನಲ್ಲಿ ಮಾರಾಟವಾಗಿದ್ದ ಗೊಬ್ಬರ ಕಳಪೆ ಗುಣಮಟ್ಟದ್ದು ಎಂದು ರೈತರು ಆರೋಪಿಸಿದ್ದರು. ಸಂಸ್ಥೆಯಲ್ಲಿ ಪಡೆದ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅಲ್ಲಿ ಪ್ಯಾಕೇಟ್ ಮೇಲೆ ನಮೂದಿಸಿದ ಅಂಶಗಳು ಪತ್ತೆಯಾಗಿಲ್ಲ ಎಂಬುದು ರೈತರ ದೂರಾಗಿತ್ತು. ಈ ಬಗ್ಗೆ ಅವರು ಪೊಲೀಸರು ಹಾಗೂ ಕೃಷಿ-ತೋಟಗಾರಿಕಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಆ ದೂರಿನ ಪ್ರಕಾರ ಮಂಗಳವಾರ ಸಂಸ್ಥೆಯ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಮೊದಲ ಗೋದಾಮು ಪರಿಶೀಲಿಸಿದಾಗ ಅಲ್ಲಿ ಕೃಷಿ ಮಿತ್ರ ಗೊಬ್ಬರ ಸಿಗಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಎಲ್ಲಾ ಗೊಬ್ಬರ ಮಾರಾಟವಾಗಿದ್ದು, ಇದೀಗ ಬೇರೆ ಗೊಬ್ಬರ ತರಿಸಿದ ಬಗ್ಗೆ ಸಿಬ್ಬಂದಿ ಉತ್ತರಿಸಿದ್ದರು. ಇನ್ನೊಂದು ಗೋದಾಮು ಪರಿಶೀಲಿಸಿದಾಗ ಅಲ್ಲಿ ಕೃಷಿ ಮಿತ್ರ ಗೊಬ್ಬರದ ಚೀಲಗಳು ಕಂಡಿದ್ದು, ಸುಳ್ಳು ಹೇಳಿದಕ್ಕಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಎಲ್ಲವೂ ಇಲ್ಲೆ.. ಆದರೆ, ಯಾವೂದು ಸರಿಯಿಲ್ಲೆ!
ಕೃಷಿಮಿತ್ರ ಕಾಳು ಗೊಬ್ಬರದಲ್ಲಿನ ಎನ್ಪಿಕೆ ಪ್ರಮಾಣ ನಮೂದಿಸಿದ ಪ್ರಮಾಣದಲ್ಲಿ ಇಲ್ಲ ಎಂಬುದು ದೂರುದಾರರ ಮುಖ್ಯ ಆರೋಪ. ಸಿದ್ದಾಪುರ ತಾಲೂಕಿನ ರೈತ ಮಹಾಬಲೇಶ್ವರ ಹೆಗಡೆ ಈ ಪ್ರಕರಣದ ದೂರುದಾರರಾಗಿದ್ದಾರೆ. ಟಿಎಸ್ಎಸ್ ಸಂಸ್ಥೆಯಲ್ಲಿ ಖರೀದಿಸಿದ ಗೊಬ್ಬರವನ್ನು `ಬೆಂಗಳೂರಿನ ಮಾಧವ ಅಸೋಸಿಯೆಟ್\’ನಲ್ಲಿ ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಹಳೆಯ ಆಡಳಿತ ಮಂಡಳಿ ಹಾಗೂ ಹೊಸ ಆಡಳಿತ ಮಂಡಳಿಯ ನಡುವಿನ ಕಚ್ಚಾಟವೇ ಈ ಪ್ರಕರಣಕ್ಕೆ ಕಾರಣವಾಗಿದ್ದು, `ಹಳೆ ಆಡಳಿತ ಮಂಡಳಿ ಇದ್ದಾಗ ಗೊಬ್ಬರ ಸರಿಯಾಗಿತ್ತು\’ ಎಂದು ದೂರುದಾರರು ನೀಡಿದ ಹೇಳಿಕೆ ಅನುಮಾನಕ್ಕೆ ಕಾರಣ.
ಮOಗಳವಾರ ದಾಳಿಯ ಬಗ್ಗೆ ರೈತರು ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..