ಕುಮಟಾ: ಮಂಜುನಾಥ ಗೌಡರ ಹಿಂಸೆಯಿoದ ಬೇಸತ್ತು ವೃದ್ಧಾಶ್ರಮ ಸೇರಿರುವ ಕೂಜಳ್ಳಿಯ ಇಡಗಿ ಗೌಡ `ತನಗೆ ನ್ಯಾಯ ಒದಗಿಸಿ\’ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕುಮಟಾ ತಹಶೀಲ್ದಾರ್ ಹಾಗೂ ವಿಭಾಗಾಧಿಕಾರಿಗಳ ಮೂಲಕ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಹ ಪತ್ರ ರವಾನಿಸಿದ್ದಾರೆ.
ಇದನ್ನೂ ಓದಿ: ಕಾಸಿಗಾಗಿ ಕತ್ತು ಹಿಸುಕಿದ ಪುತ್ರ
ಕೂಲಿ ಮಾಡಿ ಬದುಕಿಕೊಂಡಿದ್ದ ಇಡಗಿ ಗೌಡ ಅವರನ್ನು ಆಕೆಯ ಪುತ್ರ ಮಂಜುನಾಥ ಗೌಡ ಮನೆಯಿಂದ ಹೊರದಬ್ಬಿದ್ದರು. ಅದಾದ ನಂತರ ಬೆಂಗಳೂರಿಗೆ ಹೋಗಿದ್ದ ಇಡಗಿ ಗೌಡ ಅಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಳು. 1 ಲಕ್ಷ ರೂ ಹಣ ಹಾಗೂ ಎರಡು ತೊಲೆ ಬಂಗಾರದ ಸರವನ್ನು ಅವರು ಮಾಡಿಸಿಕೊಂಡಿದ್ದು, ಅದನ್ನು ಆಕೆಯ ಪುತ್ರ ಅಪಹರಿಸಿದ್ದ. ವೃದ್ಧಾಶ್ರಮ ಸೇರಿದ ಇಡಗಿ ಗೌಡ ತನ್ನ ನೋವು ಹೇಳಿಕೊಂಡಿದ್ದರು. ಪ್ರಸ್ತುತ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರ ನೆರವು ಪಡೆದು ಇಡಗಿ ಗೌಡ ಕಾನೂನು ಹೋರಾಟ ಶುರು ಮಾಡಿದ್ದಾರೆ.
ಇದನ್ನೂ ಓದಿ: ಸೇವೆ ಉಚಿತ: ಪರಿಹಾರ ಖಚಿತ! ಕಾನೂನು ಹೋರಾಟಕ್ಕೆ ಉಚಿತ ನೆರವು
ಈ ಕೇಂದ್ರದ ಆಗ್ನೇಲ್ ರೋಡ್ರಿಗ್ರಿಸ್ ಹಾಗೂ ಸುಧಾಕರ ನಾಯ್ಕ ಇಡಗಿ ಅವರಿಗೆ ನೆರವಾಗುತ್ತಿದ್ದಾರೆ.