
ಅಂಕೋಲಾ: ವಂದಿಗೆಯ ಪರ್ಲಕ್ಕಿಬೇಣದ ಹೆದ್ದಾರಿ ಅಂಚಿನಲ್ಲಿ ನಡೆದು ಹೋಗುತ್ತಿದ್ದ ಸೋಮಾ ಕಡಬಾ ಗೌಡ (65) ಅವರಿಗೆ ಬೆಂಗಳೂರಿನ ರವಿಕುಮಾರ ಎಂಬಾತರು ಕಾರು ಗುದ್ದಿದ್ದು, ಸೋಮಾ ಗೌಡ ಅವರು ಸಾವನಪ್ಪಿದ್ದಾರೆ.
ಸೆ 16ರಂದು ಸೋಮಾ ಗೌಡ ಹೆದ್ದಾರಿ ಅಂಚಿನಲ್ಲಿ ನಡೆದು ಹೋಗುತ್ತಿದ್ದರು. ಜೋರಾಗಿ ಕಾರು ಓಡಿಸಿಕೊಂಡು ಬಂದ ರವಿಕುಮಾರ್ ಅವರಿಗೆ ಡಿಕ್ಕಿ ಹೊಡೆದಿದ್ದರಿಂದ ಸೋಮಾ ಗೌಡ ನೆಲಕ್ಕೆ ಬಿದ್ದು ಗಾಯಗೊಂಡಿದ್ದರು. ಸೋಮಾ ಗೌಡರ ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟಾಗಿತ್ತು. ತಕ್ಷಣ ಅವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಮಂಗಳೂರಿನ ಎಜೆ ಆಸ್ಪತ್ರೆಗೆ ಅವರನ್ನು ಸಾಗಿಸಲಾಯಿತು. ಸೆ 17ರಂದು ಮತ್ತೆ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ಕರೆತಂದು ಉಪಚಾರ ಮಾಡಲಾಯಿತು. ಆದರೆ, ಅವರು ಬದುಕಲಿಲ್ಲ.