ಯಲ್ಲಾಪುರ: ಗುಳ್ಳಾಪುರ ಬಳಿ ಚಿಕ್ಕುಮನೆ ತಿರುವಿನಲ್ಲಿ ಲಾರಿಯೊಂದು ಬುಧವಾರ ಪಲ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ತುಂಬ ಹೊಂಡಗಳೇ ತುಂಬಿಕೊoಡಿದ್ದು, ಅಪಘಾತಕ್ಕೆ ಮೂಲ ಕಾರಣ.
ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆ ಬರುವ ಲಾರಿ ಹೆದ್ದಾರಿಯಲ್ಲಿನ ಹೊಂಡಕ್ಕೆ ಇಳಿದಿದ್ದು, ಆ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿದೆ. ಲಾರಿ ಪಲ್ಟಿಯಾಗಿದ್ದರಿಂದ ಜಖಂ ಆಗಿದೆ. ಈ ಭಾಗದಲ್ಲಿ ಲಾರಿ ಪಲ್ಟಿ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ವಾರ ಶಿರಲೆ ಬಳಿ ಸಹ ಲಾರಿ ಪಲ್ಟಿಯಾಗಿತ್ತು. ಆ ವೇಳೆ ಸಹ ಚಾಲಕ ಹೆದ್ದಾರಿ ಹೊಂಡವೇ ಲಾರಿ ಅಪಘಾತಕ್ಕೆ ಕಾರಣ ಎಂದಿದ್ದರು.
ಇದೀಗ ಪಲ್ಟಿಯಾದ ಲಾರಿ ಚಾಲಕ ಸಹ ಆಳವಾದ ಹೊಂಡದಲ್ಲಿ ಚಕ್ರ ಬಿದ್ದ ಕಾರಣ ಲಾರಿ ನಿಯಂತ್ರಣ ತಪ್ಪಿರುವ ಬಗ್ಗೆ ಹೇಳಿದ್ದಾರೆ. ಲಾರಿ ಜೊತೆ ಇನ್ನಿತರ ವಾಹನಗಳು ಸಹ ಹೆದ್ದಾರಿ ಹೊಂಡಕ್ಕೆ ಬಲಿಯಾಗುತ್ತಿವೆ.