ಶಿರಸಿ: ಕುಮಟಾ ರಸ್ತೆಯಲ್ಲಿದ್ದ ಚಾದರ ವ್ಯಾಪಾರ ಮಾಡುವ ರಫಿಕ್ ಬುಡನಸಾಬ್ ಎಂಬಾತರ ಅಂಗಡಿ ಮೇಲೆ ಅಬ್ದುಲ್ ಹಸನಸಾಬ್ ಹಾಗೂ ಇನ್ನಿಬ್ಬರು ದಾಳಿ ನಡೆಸಿದ್ದಾರೆ.
ಮುಸ್ಲಿಂಗಲ್ಲಿಯ ರಫಿಕ್ ಬುಡನ್ಸಾಬ್ ಚಾದರ ವ್ಯಾಪಾರ ಮಾಡಿಕೊಂಡಿದ್ದು, ಸೆ 17ರ ಮಧ್ಯಾಹ್ನ 4.30ಕ್ಕೆ ಅವರು ಅಂಗಡಿಗೆ ಬೀಗ ಹಾಕಿ ಹೊರಗೆ ಹೋಗಿದ್ದರು. ಆ ವೇಳೆ ಅಲ್ಲಿಗೆ ಬಂದ ರಫಿಕ್ ಹಾಗೂ ಇನ್ನಿಬ್ಬರು ಡ್ರಿಲ್ ಹಾಗೂ ಚಾಣ ಬಳಸಿ ಅಂಗಡಿಯ ಬಾಗಿಲು ಒಡೆದಿದ್ದಾರೆ. ನಂತರ ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ ಸಿಸಿ ಟಿವಿ ಒಡೆದು ಪರಾರಿಯಾಗಿದ್ದಾರೆ.
4.45ಕ್ಕೆ ರಫಿಕ್ ಅಂಗಡಿಗೆ ಮರಳಿದಾಗ ಕಳ್ಳತನಕ್ಕೆ ಪ್ರಯತ್ನಿಸಿರುವುದು ಗೊತ್ತಾಗಿದೆ. ಆ ಮೂವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಫಿಕ್ ಪೊಲೀಸ್ ದೂರು ನೀಡಿದ್ದಾರೆ.