ಕಾರವಾರ: ಬೆಳಗಾವಿ ವಿಭಾಗ ಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ಬಾಡ ಶಿವಾಜಿ ಬಾಲಮಂದಿರ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಸೆ 20ರಂದು ಅಂಕೋಲಾದ ಶೇಟಗೇರಿಯಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು. ಬಾಡದಲ್ಲಿರುವ ಶಿವಾಜಿ ಬಾಲ ಮಂದಿರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಭಿಷೇಕ್ ಶೇಟ್ ನೇತ್ರತ್ವದ ತಂಡದವರು ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರತಿಸ್ಪರ್ಧಿ ತಂಡವನ್ನು ಅವರು ವಿಭಾಗ ಮಟ್ಟಕ್ಕೆ ಅವಕಾಶ ಪಡೆದರು.
ದೈಹಿಕ ಶಿಕ್ಷಣ ಶಿಕ್ಷಕ ಉಲ್ಲಾಸ ಆರ್ ನಾಯ್ಕ ಈ ತಂಡಕ್ಕೆ ತರಬೇತಿ ನೀಡಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ವಿಠೋಬಾ ನಾಯ್ಕ, ಮುಖ್ಯಾಧ್ಯಾಪಕಿ ರೂಪಾ ಗಾಂವಕಾರ ಹಾಗೂ ಸಂಸ್ಥೆ ವ್ಯವಸ್ಥಾಪಕ ನವೀನ ಗುನಗಾ ಮಕ್ಕಳನ್ನು ಪ್ರೋತ್ಸಾಹಿಸಿದ್ದರು. ಈ ಸ್ಪರ್ಧಾಳುಗಳ ಸಾಧನೆ ಗಮನಿಸಿದ ಬಾಡದ ಶಿವಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಪಿ. ನಾಯ್ಕ, ಉಪಾಧ್ಯಕ್ಷ ಅಶೋಕ್ ನಾಯ್ಕ, ಕಾರ್ಯದರ್ಶಿ ಪ್ರಕಾಶ್ ರಾಣಿ, ಸಹ ಕಾರ್ಯದರ್ಶಿ ಶಿವಾನಂದ ಕದಂ, ಖಜಾಂಚಿ ಕಿಶೋರ್ ರಾಣಿ ಮಕ್ಕಳನ್ನು ಹುರಿದುಂಬಿಸಿದರು. ಸಿದ್ದಾಪುರ ತಾಲೂಕಿನಲ್ಲಿ ವಿಭಾಗ ಮಟ್ಟದ ಸ್ಪರ್ಧೆ ನಡೆಯಲಿದೆ.