ಹೊನ್ನಾವರ: ಜಾನುವಾರುಗಳ ಕುತ್ತಿಗೆ ಹಾಗೂ ಕಾಲುಗಳಿಗೆ ನೈಲಾನ್ ಹಗ್ಗ ಕಟ್ಟಿ ಸಾಗಿಸುತ್ತಿದ್ದ ಐವರನ್ನು ಮಂಕಿ ಪೊಲೀಸರು ಪತ್ತೆ ಮಾಡಿದ್ದಾರೆ. ಆ ಮೂಲಕ 27 ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಹಾಸನದ ಅಹ್ಮದ್ ಇಬ್ರಾಹಿಂ, ಮಹಮದ್ ತಾಹೀರ, ಹಾವೇರಿಯ ತಾಹಿರ್ ಮಹ್ಮದ್, ಹೊಳೆನರಸಿಂಹಪುರದ ಸಮಿವುಲ್ಲಾ ಹಾಗೂ ಹಿರೇಕೇರುರು ಮುಬಾರಿಕ್ ಅಲಿ ಎಂಬಾತರು ಎತ್ತು, ಹಸು, ಎಮ್ಮೆ ಹಾಗೂ ಕೋಣ ಸೇರಿ 27 ಜಾನುವಾರುಗಳ ಕುತ್ತಿಗೆ ಹಾಗೂ ಕಾಲುಗಳನ್ನು ನೈಲಾನ್ ಹಗ್ಗದಿಂದ ಬಿಗಿದು ಈಚರ್ ವಾಹನದಲ್ಲಿ ಸಾಗಿಸುತ್ತಿದ್ದರು. ಹಾವೇರಿಯಿಂದ ಕೇರಳ ಕಾಸರಗೋಡಿನ ಕಸಾಯಿಖಾನೆಗೆ ಈ ಜಾನುವಾರುಗಳು ಹೋಗುತ್ತಿದ್ದವು. ಚಿತ್ತಾರ ಕ್ರಾಸಿನ ಬಳಿ ಪೊಲೀಸರು ಆ ವಾಹನ ಹಿಡಿದು ತಪಾಸಣೆ ನಡೆಸಿದ್ದು, ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ಪ್ರಾಣಿಗಳನ್ನು ಬಿಡುಗಡೆ ಮಾಡಿದರು. ನಂತರ ಆ ಎಲ್ಲಾ ಜಾನುವಾರುಗಳಿಗೆ ನೀರು ಹಾಗೂ ಹುಲ್ಲು ವಿತರಿಸಿದರು.