ಶಿರಸಿ: ಬೆಳಲೆ ಬಸ್ ನಿಲ್ದಾಣದ ಬಳಿ ಸರಾಯಿ ಮಾರಾಟ ಹಾಗೂ ಸೇವನೆಗೆ ಅವಕಾಶ ಕೊಟ್ಟಿದ್ದ ವಾಮನ ನಾಗಾ ಚಲವಾದಿ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಆತನ ಬಳಿಯಿದ್ದ ವಿವಿಧ ಮದ್ಯದ ಪ್ಯಾಕೇಟ್ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ನಿರೀಕ್ಷಕ ಸೀತಾರಾಮ ಪಿ ಈ ದಾಳಿಯಲ್ಲಿದ್ದರು.
ಮಟ್ಕಾ ಆಟಕ್ಕೆ ತಡೆ
ಶಿರಸಿಯ ಗಣೇಶನಗರ ಮಾರುತಿ ದೇವಸ್ಥಾನ ಹಿಂದೆ ಉಮೇಶ ವೆಂಕಟು ನಾಯ್ಕ ಮಟ್ಕಾ ಆಡಿಸುತ್ತಿದ್ದು, ಅದಕ್ಕೆ ಪಿಎಸ್ಐ ನಾಗಪ್ಪ ತಡೆ ಒಡ್ಡಿದರು. ಮಟ್ಕಾ ಸಾಮಗ್ರಿ ಜೊತೆ ಆತನಲ್ಲಿದ್ದ ಹಣವನ್ನು ವಶಕ್ಕೆ ಪಡೆದರು.
ಕುಮಟಾದ ಮಿರ್ಜಾನ್ ಬಳಿಯ ಸೈಮನ್ ಲಾರೆನ್ಸ ರೋಡಿಗ್ರಿಸ್ ಸಹ ಮಟ್ಕಾ ಆಡಿಸುತ್ತಿದ್ದಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾನೆ. ಪಿಎಸ್ಐ ಯೋಗೀಶ್ ಆತನ ಮೇಲೆ ದಾಳಿ ನಡೆಸಿದ್ದು, ಆತನಲ್ಲಿದ್ದ ಹಣ ಹಾಗೂ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿದ್ದಾಪುರ: ಒಂದೇ ದಿನ ಹಲವು ದಾಳಿ
ಸಿದ್ದಾಪುರ: ಬಿರ್ಲಮಕ್ಕಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಮಹಾಬಲೇಶ್ವರ ಅಜ್ಜಯ್ಯ ನಾಯ್ಕ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದಾಗ ಆ ಕಿರಾಣಿ ಅಂಗಡಿಯಲ್ಲಿ ಹಲವು ಬಗೆಯ ಮದ್ಯದ ಪ್ಯಾಕೆಟ್\’ಗಳು ಸಿಕ್ಕಿವೆ. ಪಿಎಸ್ಐ ಕುಮಾರ್ ದಾಳಿ ನಡೆಸಿದರು.
ಮಂಡ್ಲಿಕೊಪ್ಪದ ಮೋಹನ ಪಾಂಡು ನಾಯ್ಕ ಮೇಲೆ ಪಿಎಸ್ಐ ಗೀತಾ ಶಿರ್ಶಿಕರ್ ದಾಳಿ ನಡೆಸಿದಾಗ ಅಲ್ಲಿ ಸಹ ಅಕ್ರಮ ಸರಾಯಿ ಮಾರಾಟ ಬೆಳಕಿಗೆ ಬಂದಿದೆ. ಮದ್ಯದ ಬಾಟಲಿಗಳನ್ನು ಅವರು ವಶಕ್ಕೆ ಪಡೆದಿದ್ದಾರೆ. ಬೇಡ್ಕಣಿಯ ಗಣಪತಿ ಹುಚ್ಚಾ ನಾಯ್ಕ ಸಹ ಅಕ್ರಮ ಸರಾಯಿ ಮಾರಾಟಗಾರನಾಗಿದ್ದು, ಪಿಎಸ್ಐ ಅನೀಲ ಬಿಎಂ ಅವರ ಮೇಲೆ ದಾಳಿ ನಡೆಸಿದರು. ಅಲ್ಲಿ ಸಂಗ್ರಹಿಸಿದ್ದ ಮದ್ಯವನ್ನು ಅವರು ವಶಕ್ಕೆ ಪಡದರು.