ಶಿರೂರು ಗುಡ್ಡ ಕುಸಿತ ಪರಿಣಾಮ ಲಾರಿ ಜೊತೆ ನದಿ ಆಳಕ್ಕೆ ತಲುಪಿದ್ದ ಕೇರಳದ ಅರ್ಜುನನ ಶವ ಚೂರು ಚೂರಾಗಿದೆ.
ಎರಡು ತಿಂಗಳ ಕಾಲ ನದಿ ಆಳದಲ್ಲಿದ್ದ ಶವವನ್ನು ರಕ್ಷಣಾ ಸಿಬ್ಬಂದಿ ಬುಧವಾರ ಹೊರ ತೆಗೆದರು. ಅರ್ಜುನನನ್ನು ನೋಡಲು ಸ್ಥಳದಲ್ಲಿ ನೂರಾರು ಜನ ಆಗಮಿಸಿದ್ದು, ಹಾಗೂ ಅರ್ಜುನನ ಅವಶೇಷಗಳನ್ನು ನೋಡಿ ಮರುಕ ವ್ಯಕ್ತಪಡಿಸಿದರು. ನದಿ ಆಳದಲ್ಲಿದ್ದ ಲಾರಿಯ ಕ್ಯಾಬಿನ್\’ನ್ನು ಕ್ರೇನ್ ಮೂಲಕ ಮೇಲೆ ತರಲಾಯಿತು. ಈ ವೇಳೆ ಲಾರಿಯಲ್ಲಿದ್ದ ಅರ್ಜುನನ ಶವವನ್ನು ರಕ್ಷಣಾ ಸಿಬ್ಬಂದಿ ಬೋಟಿಗೆ ದಾಟಿಸಿಕೊಂಡರು. ಅರ್ಜುನನ ಶವ ಸಂಪೂರ್ಣ ಬೆಂಡಿನoತಾಗಿದ್ದು, ಶವವನ್ನು ಎತ್ತಿ ಬೋಟಿಗೆ ಹಾಕುವ ವೇಳೆ ಎಚ್ಚರಿಕೆವಹಿಸಲಾಯಿತು. ಉತ್ತರ ಕನ್ನಡ ಜಿಲ್ಲಾಡಳಿತದ ಹಲವು ಅಧಿಕಾರಿಗಳು ಈ ಕಾರ್ಯಾಚರಣೆಗೆ ಸಾಕ್ಷಿಯಾದರು.
ನದಿ ಆಳದಲ್ಲಿದ್ದ ಲಾರಿ ಹಾಗೂ ಲಾರಿಯಲ್ಲಿ ಸಿಲುಕಿದ್ದ ಶವ ಮೇಲೆತ್ತಿದ ವಿಡಿಯೋ ಇಲ್ಲಿ ನೋಡಿ..