ಸಿದ್ದಾಪುರ: ಸಿದ್ದಾಪುರ ಪೊಲೀಸರು ಅಕ್ರಮ ಮದ್ಯ ಮಾರಾಟಗಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಹಾರ್ಸಿಕಟ್ಟಾದ ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಕಿರಾಣಿ ಅಂಗಡಿಯಲ್ಲಿದ್ದ ಎಲ್ಲಾ ಮದ್ಯದ ಪ್ಯಾಕೇಟ್\’ನ್ನು ವಶಕ್ಕೆ ಪಡೆದ ಪೊಲೀಸರು ಗಣಪತಿ ತಿಪ್ಪಾ ನಾಯ್ಕ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸುವ ತಯಾರಿ ನಡೆಸಿದ್ದಾರೆ. ಹಾರ್ಸಿಕಟ್ಟಾದಲ್ಲಿ ಕಿರಾಣಿ ಅಂಗಡಿ ನಡೆಸುವ ಗಣಪತಿ ನಾಯ್ಕ ಅಲ್ಲಿ ಅಕ್ರಮವಾಗಿ ಸರಾಯಿಯನ್ನು ಸಹ ಮಾರಾಟ ಮಾಡುತ್ತಿದ್ದ. ಅನುಮತಿ ಇಲ್ಲದಿದ್ದರೂ ಅಲ್ಲಿಗೆ ಬರುವ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ.
ಸೆ 25ರ ಸಂಜೆ ಅಲ್ಲಿಗೆ ತೆರಳಿದ ಮಹಿಳಾ ಪಿಎಸ್ಐ ಆತನ ವ್ಯವಹಾರಗಳನ್ನು ಪರಿಶೀಲಿಸಿದರು. ಆತ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಖಚಿತವಾದ ಹಿನ್ನಲೆ ತಮ್ಮ ಸಿಬ್ಬಂದಿ ಜೊತೆ ದಾಳಿ ನಡೆಸಿದರು. ಕಿರಾಣಿ ಅಂಗಡಿಯಲ್ಲಿದ್ದ ಅಕ್ರಮ ಸರಾಯಿ ಜೊತೆ ಮದ್ಯ ಸೇವನೆಗೆ ಬಳಸುತ್ತಿದ್ದ ಪ್ಲಾಸ್ಟಿಕ್ ಲೋಟಗಳನ್ನು ಸಹ ವಶಕ್ಕೆ ಪಡೆದ ಅವರು ಗಣಪತಿ ನಾಯ್ಕ ವಿರುದ್ಧ ಪ್ರಕರಣ ದಾಖಲು ಮಾಡಿದರು.