
ಕುಮಟಾ: ಆಟೋ ಹಾಗೂ ಬೈಕಿನ ನಡುವೆ ನಡೆದ ಅಪಘಾತದಿಂದ ಬೈಕಿನ ಹಿಂಬದಿ ಸವಾರನಿಗೆ ಪೆಟ್ಟಾಗಿದೆ.
ಸೆ 22ರಂದು ವಿಕ್ಕಿ ಕೈತಾನ ಡಿಸೋಜಾ ಎಂಬಾತರು ಧಾರೇಶ್ವರದಿಂದ ಅಳ್ವೆಕೊಡಿ ಕಡೆ ರಿಕ್ಷಾ ಓಡಿಸುತ್ತಿದ್ದರು. ಪವನ್ ಮೋಟರ್ಸ ಕಡೆ ಅವರು ಹೋಗುತ್ತಿದ್ದಾಗ ರಾಯಲ್ ಎನ್ಫಿಲ್ಡ್ ಬೈಕ್ ಓಡಿಸಿಕೊಂಡು ಬಂದ ಶ್ರೀಶೈಲ್ ಕೆರೂರು ಆ ರಿಕ್ಷಾಗೆ ಗುದ್ದಿದ್ದು, ಪರಿಣಾಮ ಬೈಕಿನ ಹಿಂದೆ ಕೂತಿದ್ದ ಸಚಿನ ಅಶೋಕ ಬಶೆಟ್ಟಿ ಎಂಬಾತರಿಗೆ ಗಾಯವಾಗಿದೆ.