ಹೊನ್ನಾವರ: ಆನ್ಲೈನ್ ಜಾಬ್ ಆಮೀಷಕ್ಕೆ ಒಳಗಾದ ಸಾಪ್ಟವೇರ್ ಇಂಜಿನಿಯರ್ ಸುಬ್ರಹ್ಮಣ್ಯ ಭಟ್ಟ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ 17.30 ಲಕ್ಷ ರೂ ಕಳೆದುಕೊಂಡಿದ್ದಾರೆ. `ತನ್ನ ಹಣ ತನಗೆ ಮರಳಿಸಿ\’ ಎಂದು ವಂಚನೆಗೊಳಗಾಗ ಸುಬ್ರಹ್ಮಣ್ಯ ಪೊಲೀಸ್ ದೂರು ನೀಡಿದ್ದು, ವಿದ್ಯಾವಂತರೇ ಈ ರೀತಿಯ ಆಮೀಷಕ್ಕೆ ಒಳಗಾಗಿ ಹಣ ಕಳೆದುಕೊಂಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದೆ.
ಮಾಗೋಡು ಮಳ್ಳಿಕೇರಿಯ ಸುಬ್ರಹ್ಮಣ್ಯ ರಾಮಚಂದ್ರ ಭಟ್ಟ ಅವರು ಅಪರಿಚಿತರ ಮಾತು ನಂಬಿ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹೂಡಿಕೆ ಮಾಡಿದ್ದರು. ಆನ್ಲೈನ್ ಉದ್ಯೋಗ ಹಾಗೂ ಆನ್ಲೈನ್ ಟ್ರೇಡಿಂಗ್ ಮೂಲಕ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಮಾಡಿಕೊಡುವುದಾಗಿ ಆನ್ಲೈನ್ ಮೂಲಕವೇ ಅಪರಿಚಿತರು ನಂಬಿಸಿದ್ದರು.
28 ಮಾರ್ಚ 2024ರಿಂದ 1 ಜುಲೈ 24ರವರೆಗೆ ಸುಬ್ರಹ್ಮಣ್ಯ ಭಟ್ಟರು 17.30 ಲಕ್ಷ ರೂ ಹೂಡಿಕೆ ಮಾಡಿದ್ದು, ಆ ಹಣವನ್ನು ಹಿಂತಿರುಗಿಸದೇ ವಂಚಕರು ಮೋಸ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತರ ಪತ್ತೆಗೆ ಹುಡುಕಾಟ ಶುರು ಮಾಡಿದ್ದಾರೆ.