ಕುಮಟಾ: ಸಾಕಷ್ಟು ಸಂಕಷ್ಟದ ನಂತರವೂ ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ ಜಿಲ್ಲಾಡಳಿತಕ್ಕೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕೃತಜ್ಞತೆ ಸಲ್ಲಿಸಿದ್ದಾರೆ.
`71 ದಿನಗಳ ಕಾರ್ಯಾಚರಣೆ ನಂತರ ಅರ್ಜುನನ ಕುಟುಂಬಕ್ಕೆ ಶವ ಸಿಕ್ಕಿದೆ. ಜೊತೆಗೆ ನೀರಿನ ಆಳದಲ್ಲಿದ್ದ ಲಾರಿಯನ್ನು ಸಹ ಮೇಲೆತ್ತಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಕಾರವಾರ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ವಿಶೇಷ ಮುತುವರ್ಜಿವಹಿಸಿ ಈ ಕೆಲಸ ಮಾಡಿದ್ದಾರೆ. ಅವರೆಲ್ಲರ ಶ್ರಮಕ್ಕೆ ಅಭಿನಂದಿಸುವುದು ಪ್ರತಿಯೊಬ್ಬರ ಕರ್ತವ್ಯ\’ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ರಿಸ್ ಹೇಳಿದರು.
`ಈ ದುರಂತದಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ್ ನಾಯ್ಕ ಕುಟುಂಬಕ್ಕೆ ಸಹ ನ್ಯಾಯ ಸಿಗಬೇಕು. ಅವರ ಹುಡುಕಾಟದ ಜೊತೆ ಕುಟುಂಬದವರಿಗೂ ನೆರವು ಅಗತ್ಯ\’ ಎಂದು ಅವರು ಹೇಳಿದ್ದಾರೆ.