ಶಿರಸಿ: ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಕಸ್ತೂರಿ ರಂಗನ್ ವರದಿಗೆ ಸಚಿವ ಸಂಪುಟವು ತಿರಸ್ಕರಿಸಲು ತೀರ್ಮಾನಿಸಿದ್ದು, ರಾಜ್ಯ ಸರ್ಕಾರದ ಜನಪರ ನಿಲುವಿಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸ್ವಾಗತಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದ ತೀರ್ಮಾನ ಪ್ರಕಟಿಸಿದ ಜಿಲ್ಲೆಯಲ್ಲಿ ಹೋರಾಟಕ್ಕೆ ಸಹಕರಿಸಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರನ್ನು ಭೇಟಿ ಮಾಡಿ ಸಂತಸ ವ್ಯಕ್ತಪಡಿಸಿದರು.
ಕರಡು ವರದಿಯನ್ನ ತಿರಸ್ಕರಿಸಲು ಫಶ್ಚಿಮ ಘಟ್ಟ ಪ್ರದೇಶದ ಜನಪ್ರತಿನಿಧಿಗಳು ಅಮೂಲಾಗ್ರವಾಗಿ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ವರದಿ ಅವೈಜ್ಞಾನಿಕ ಅಂಶಗಳ ಕುರಿತು ವ್ಯಾಪಕ ಟೀಕೆಗೆ ಕಾರಣವಾಗಿತ್ತು ಎಂದು ರವೀಂದ್ರ ನಾಯ್ಕ ಹೇಳಿದರು. ಕಳೆದ 11 ವರ್ಷಗಳ ಹಿಂದೆ ಮಂಡಿಸಲಾದ ಕರಡು ಕಸ್ತೂರಿ ರಂಗನ್ ವರದಿ ಕುರಿತು ಹೋರಾಟಗಾರರ ವೇದಿಕೆಯು ವ್ಯಾಪಕವಾದ ಹೋರಾಟ, ಜನಜಾಗೃತಿ ಹಾಗೂ ಒಂದು ಲಕ್ಷ ಕುಟುಂಬದಿAದ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸುವ ಅಭಿಯಾನ ಮುಂತಾದ ವಿವಿಧ ರೀತಿಯ ವ್ಯಾಪಕವಾದ ಹೋರಾಟವನ್ನ ಹಮ್ಮಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರ ಕರಡು ವರದಿ ತಿರಸ್ಕರಿಸಲು ಹೋರಾಟಗಾರರ ವೇದಿಕೆಯು ಒತ್ತಾಯಿಸಲಾಗಿತ್ತು ಎಂದು ರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು.
ಸರ್ಕಾರದ ವಿರುದ್ಧ ಗ್ರಾಮ ಆಡಳಿತಾಧಿಕಾರಿಗಳ ಮುನಿಸು!
ಯಲ್ಲಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ನಂತರ ತಮ್ಮ ಬೇಡಿಕೆಗಳ ಪಟ್ಟಿಯನ್ನು ಅವರು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ರವಾನಿಸಿದರು.
ಅಧಿಕ ಕೆಲಸ ಒತ್ತಡ ಕಾರಣ ಅಧಿಕ ವೇತನ ನೀಡಬೇಕು. ಉತ್ತಮ ಕೊಟ್ಟಡಿ, ಕೆಲಸಕ್ಕೆ ಅಗತ್ಯವಿರುವ ಲಾಪ್ಟಾಪ್, ಪ್ರಿಂಟರ್ ಹಾಗೂ ಸ್ಕಾನರ್ ಒದಗಿಸುವ ಬಗ್ಗೆ ಆಗ್ರಹಿಸಿದರು. ಮೊಬೈಲ್ ತಂತ್ರಾAಶ ವಿಷಯವಾಗಿ ಕೆಲ ಸಿಬ್ಬಂದಿ ಅಮಾನತಾಗಿದ್ದು, ಆ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಬೆಳೆ ಸಮೀಕ್ಷೆ ಹಾಗೂ ಬೆಳೆಹಾನಿ ಪರಿಹಾರವನ್ನು ಕೃಷಿ ಹಾಗೂ ತೋಟಗಾರಿಕಾ ಇಲಾಖೆಗೆ ಹಸ್ತಾಂತರಿಸುವುದು ಸೇರಿ ವಿವಿಧ ವಿಷಯಗಳ ಕುರಿತು ಮನವಿ ರವಾನಿಸಿದರು.
ಸೃಜನ ಕಲೆಗೆ ಬೇಕು ಪ್ರೋತ್ಸಾಹ
ಕಾರವಾರ: `ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಕಲೆಗೆ ಪೋಷಕರಿಂದ ಮತ್ತು ಶಿಕ್ಷಕಕರಿಂದ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲ ದೊರೆತಲ್ಲಿ ಮಕ್ಕಳಲ್ಲಿನ ಕಲೆಯ ಅಭಿವೃದ್ದಿಗೆ ಮತ್ತಷ್ಟು ನೆರವಾಗಲಿದೆ\’ ಎಂದು ನಗರಸಭೆಯ ಪೌರಾಯುಕ್ತ ಜಗದೀಶ್ ಗುಲಗಜ್ಜಿ ಹೇಳಿದರು.
ಅವರು ಗುರುವಾರ ನಗರಸಭೆ ಸಭಾಂಗಣದಲ್ಲಿ ಸ್ವಚ್ಚತಾ ಹೀ ಸೇವಾ ಪಾಕ್ಷಕಿದ ಅಂಗವಾಗಿ ನಿರುಪಯುಕ್ತ ವಸ್ತುಗಳಿಂದ ವಿದ್ಯರ್ಥಿಗಳು ತಯಾರಿಸಿದ್ದ ಕಲಾತ್ಮಕ ವಸ್ತುಗಳನ್ನು ವೀಕ್ಷಿಸಿ ಮಾತನಾಡಿದರು.
ಪ್ರಕೃತಿಯಲ್ಲಿ ದೊರೆಯುವ ಪ್ರತಿಯೊಂದು ವಸ್ತುಗಳು ಕೂಡಾ ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ಯಾವುದೂ ಕೂಡಾ ನಿರುಪಯುಕ್ತವಲ್ಲ ಎಂಬುದನ್ನು ವಿದ್ಯರ್ಥಿಗಳು ಸಿದ್ದಪಡಿಸಿರುವ ಕಲಾತ್ಮಕ ವಸ್ತುಗಳನ್ನು ವೀಕ್ಷಿಸಿದಾಗ ಪ್ರತಿಯೊಬ್ಬರಿಗೂ ಅರಿವಾಗುತ್ತದೆ. ವಿದ್ಯರ್ಥಿಗಳಲ್ಲಿನ ಈ ರೀತಿಯ ಸೃಜಾನತ್ಮಕ ಕಲೆಗೆ ಸೂಕ್ತ ಪ್ರೋತ್ಸಾಹ ದೊರೆತಲ್ಲಿ ಇನ್ನೂ ಉತ್ತಮ ಕಲಾಕೃತಿಗಳು ಮೂಡಿ ಬರಲು ಸಾಧ್ಯವಾಗಲಿದೆ ಎಂದರು.
ನಿರುಪಯುಕ್ತ ಪ್ಲಾಸ್ಟಿಕ್ ವಸ್ತಗಳಿಂದ ತಯಾರಿಸಿದ್ದ ಆರ್ಷಕ ವಸ್ತುಗಳು ಮತ್ತು ತೆಂಗಿನ ಚಿಪ್ಪಿನಿಂದ ತಯಾರಿಸಿದ್ದ ವಸ್ತುಗಳು ಆರ್ಷಣೀಯವಾಗಿದ್ದವು. ಪೇಪರ್ ಕಪ್ಗಳು ಮತ್ತು ಪ್ಲಾಸ್ಟಿಕ್ ಕಪ್ ಗಳಲ್ಲಿ ಹಲವು ಆರ್ಷಕ ಅಲಂಕಾರಿಕ ವಸ್ತುಗಳನ್ನು ವಿದ್ಯರ್ಥಿಗಳು ತಯಾರಿಸಿದ್ದರು.
ಕರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯರ್ಥಿಗಳು ಭಾಗವಹಿಸಿದ್ದರು.
ಸರ್ಕಾರದ ವಿರುದ್ಧ ಗ್ರಾ ಪಂ ಜನಪ್ರತಿನಿಧಿಗಳ ಆಕ್ರೋಶ
ಯಲ್ಲಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯತ ಜನಪ್ರತಿನಿಧಿಗಳು ತಾಲೂಕು ಪಂಚಾಯತ ಎದುರು ಪ್ರತಿಭಟಿಸಿದರು.
ಗ್ರಾಮ ಪಂಚಾಯತಗಳಿಗೆ ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಕ್ರಿಯಾ ಯೋಜನೆ ರವಾನಿಸಿದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಗ್ರಾ ಪಂ ಸದಸ್ಯರು ದೂರಿದರು. ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕೆಲಸ ಕುಂಠಿತವಾಗಿದೆ. ಇದರಿಂದ ಜನರ ಪ್ರಶ್ನೆಗೆ ಸರಿಯಾದ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರಬೇಕಾದ ಅನುದಾನವನ್ನು ಕೂಡಲೇ ಒದಗಿಸಬೇಕು ಎಂದು ಒತ್ತಾಯಿಸಿದರು.
ಪುನೀತ್ ಅಭಿಮಾನಿಯಿಂದ ಸೈಕಲ್ ಯಾತ್ರೆ
ಕಾರವಾರ: ನಟ ಪುನೀತ್ ರಾಜಕುಮಾರ ಅಭಿಮಾನಿಯಾದ ತಮಿಳುನಾಡು ಮೂಲದ ಮುತ್ತು ಸೆಲ್ವನ್ ಅವರು ಸೈಕಲ್ ಮೂಲಕ ದೇಶ ಪರ್ಯಟನೆಗೆ ಹೊರಟಿದ್ದು ಕಾರವಾರ ತಲುಪಿದ್ದಾರೆ.
ತಮಿಳುನಾಡಿನ ಕೊಯಮತ್ತೂರು ಮೂಲದ ಇವರು ನಟ ಪುನೀತ ರಾಜಕುಮಾರ ಅವರ ಮರಣದ ಬಳಿಕ ಸೈಕಲ್ ಮೂಲಕ ದೇಶ ಪರ್ಯಟನೆ ಮಾಡಲು ಮುಂದಾಗಿದ್ದಾರೆ. 2021 ರ ಡಿಸೆಂಬರ್ ತಿಂಗಳಲ್ಲಿ ಪ್ರಯಾಣ ಆರಂಭಿಸಿದ ಇವರು ಮಧ್ಯಪ್ರದೇಶದ ಮೂಲಕ ವಿವಿಧ ರಾಜ್ಯ ಸಂಚರಿಸಿ ಲಡಾಕ್ ಹಾಗೂ ರಾಜಸ್ಥಾನ ಮಾರ್ಗವಾಗಿ ಗೋವಾ ರಾಜ್ಯದ ಮೂಲಕ ಮರಳಿ ಕರ್ನಾಟಕ ತಲಿಪಿದ್ದಾರೆ.
ದಿನಕ್ಕೆ 50 ಕಿಲೋಮೀಟರ್ ಸಂಚರಿಸಿ ಈವರೆಗೆ 23,650 ಕಿಲೋಮೀಟರ್ ಪೂರ್ಣಗೊಳಿಸಿದ್ದಾರೆ. ಕೋವಿಡ್ ಸಮಯದಲ್ಲಿ ಆಮ್ಲಜನಕ ಸಿಗದ ಕಾರಣ ತಾವು ಸಂಚರಿಸುವ ಎಲ್ಲಾ ತಾಲೂಕಿನಲ್ಲಿಯೂ ಸ್ಥಳೀಯ ಸರಕಾರ ಹಾಗೂ ಅರಣ್ಯ ಇಲಾಖೆಯ ಸಹಯೋಗದಿಂದ ಪುನೀತ ರಾಜಕುಮಾರ ಅವರ ಹೆಸರಿನಲ್ಲಿ ಗಿಡಗಳನ್ನು ನೆಡುತ್ತಿದ್ದಾರೆ. ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಗಿಡ ನೆಟ್ಟಿದ್ದಾರೆ. ಪೆಟ್ರೋಲ್ ಬಂಕ್ಗಳಲ್ಲಿ ಮಲಗಿ ಈಗಾಗಲೇ 752 ದಿನ ಕಳೆದಿದ್ದಾರೆ. ಮುಂದೆ ಪಾಂಡಿಚೇರಿ, ನೇಪಾಳ, ನಾಗಾಲ್ಯಾಂಡ್, ವಿಯೆಟ್ಮಾಂ ಮೂಲಕ ಬೆಂಗಳೂರು ಬಂದು ಅಲ್ಲಿಂದ ಜ.26 ರಂದು ದೆಹಲಿಯಲ್ಲಿ ಸಂಚಾರ ಪೂರ್ಣಗೊಳಿಸಿ ಬಳಿಕ ಪುನೀತ ರಾಜಕುಮಾರ ಅವರ ಸಮಾಧಿಯ ಮುಂದೆ ಪ್ರವಾಸದ ಬಗೆಗಿನ ಪುಸ್ತಕ ಬಿಡುಗಡೆ ಮಾಡುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.
ಸಾಧನೆಯ ಹಾದಿಯಲ್ಲಿ ಮೀನುಗಾರ ಸಂಘ
ಅoಕೋಲಾ: `ಮೀನುಗಾರರ ಸಹಕಾರಿ ಸಂಘ ಹಿಲ್ಲೂರು ಎಲ್ಲ ಸದಸ್ಯರ ಸಹಾಯ ಸಹಕಾರದಿಂದ ಆಡಳಿತ ಮಂಡಳಿಯ ಪಾರದರ್ಶಕತೆಯ ಆಡಳಿತದಿಂದ ನಿರಂತರ ಲಾಭದತ್ತ ಮುನ್ನಡೆಯುತ್ತಿದೆ\’ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಹರಿಹರ ವಿ. ಹರಿಕಾಂತ ಹಿಲ್ಲೂರು ಹೇಳಿದರು.
ಅವರು ಹಿಲ್ಲೂರಿನ ಸಂಘದ ಕಚೇರಿಯಲ್ಲಿ ಜರುಗಿದ 19ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.
`ಹಿಲ್ಲೂರಿನಂತ ಕುಗ್ರಾಮದಲ್ಲಿ ಕಳೆದ 15 ವರ್ಷದ ಹಿಂದೆ ನಿರಂತರ ಪರಿಶ್ರಮ ಮತ್ತು ಅವಿರತ ಪ್ರಯತ್ನದಿಂದ ಮೀನುಗಾರರ ಸಹಕಾರ ಸಂಘವನ್ನು ಸ್ಥಾಪನೆ ಮಾಡಿ ಸಂಘದ ಮೂಲಕ ಸದಸ್ಯರಿಗೆ, ದುರ್ಬಲರಿಗೆ, ಮಹಿಳೆಯರಿಗೆ ನಿರಂತರ ಸರಕಾರದ ಸವಲತ್ತನ್ನು ಒದಗಿಸಲಾಗುತ್ತಿದೆ. ಈ ಸಂಘ ಅವಘಡದಲ್ಲಿ ಮೃತರಿಗೆ ವಿಮೆ ಯೋಜನೆ ನೀಡುತ್ತ ತಾಲೂಕಿನಲ್ಲಿಯೇ ಮಾದರಿ ಸಂಘವಾಗಿ ಹೊರಹೊಮ್ಮಿದೆ\’ ಎಂದರು.
ಜಿಲ್ಲಾ ಕಾಂಗ್ರೆಸ್ಸಿಗೆ ಮಹಿಳಾ ಕಾರ್ಯದರ್ಶಿ
ಮುಂಡಗೋಡ: ಸಲ್ಮಾಕಿರಣ ಶೇರಕಾನೆ ಅವರನ್ನು ಉತ್ತರ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ
ಮಹಿಳೆಯರನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ದೇಶದ ಆಡಳಿತ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಅವರಿಗೆ ಈ ಹುದ್ದೆ ನೀಡಲಾಗಿದೆ.