ಕಾರವಾರ: ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಟೈಪಿಂಗ್ ಹಾಗೂ ಶಾರ್ಟಹೆಂಡ್ ಪರೀಕ್ಷೆಯಲ್ಲಿ ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಜುಲೈ ತಿಂಗಳಿನಲ್ಲಿ ಈ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆ ಎದುರಿಸಿದ ಲಕ್ಷ್ಮೀ ವಿಷ್ಣು ರಾಥೋಡ, ಸುಪ್ರಿತಾ ಕೊಮಾರ ಗೌಡಾ, ರೋಶ್ನಿ ಹರಿಶ್ಚಂದ್ರ ನಾಯ್ಕ, ದಿಶಾ ಕೃಷ್ಣಾ ಕೊಡಿಯಾ, ಸುಗಂಧಾ ಸುರೇಶ ಗೌಡಾ, ಅಂಕಿತಾ ಬಾಬು ಗೌಡಾ, ಅಭಿಶೇಕ ದಯಾನಂದ ನಾಯ್ಕ, ನೀತಾ ಪ್ರಭಾಕರ ಗುನಗಿ, ಸುಪ್ರಿತಾ ರಮೇಶ ಹಳೇಮನಿ, ಆನುಶಾ ಅಶೋಕ ಗೊವೇಕರ ಅವರು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇದರೊಂದಿಗೆ 18 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 15 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಚಾರ್ಯ ಪ್ರಸನ್ನ ತೆಂಡೂಲ್ಕರ ಅಭಿನಂದಿಸಿದರು.