ಶಿರಸಿ: ಶಂಕರಹೊoಡದ ಬಳಿ ಗಾಂಜಾ ಸೇವಿಸುತ್ತಿದ್ದ ಕಸ್ತೂರಿ ಬಾ ನಗರದ ಸರ್ಪರಾಜ್ ಶಾರುಖ್ ಸಮೀರ ಖಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢವಾಗಿದೆ.
ಡಿವೈಎಸ್ಪಿ ಗಣೇಶ್ ಕೆ ಎಲ್ ಸೂಚನೆ ಪ್ರಕಾರ ಸಿಪಿಐ ಶಶಿಕಾಂತ ವರ್ಮಾ, ಪಿಎಸ್ಐ ನಾಗಪ್ಪ ಬಿ ದಾಳಿ ನಡೆಸಿ ಆತನನ್ನು ಹಿಡಿದಿದ್ದಾರೆ. ಪೊಲೀಸ್ ಸಿಬ್ಬಂದಿ ಹನುಮಂತ ಕಬಾಡಿ, ನಾಗಪ್ಪ ಲಮಾಣಿ, ಅರುಣ ಲಮಾಣಿ, ಸತೀಶ ಅಂಬಿಗ, ಮಂಜುನಾಥ ಪಾವಗಡ, ಹನುಮಂತ ಈ ಕಾರ್ಯಾಚರಣೆಯಲ್ಲಿದ್ದರು.