ಶಿರಸಿ: ಸಿದ್ದಾಪುರ ಹಣಜೆಬೈಲಿನ ವೆಂಕಟ್ರಮಣ ಮುಕುಂದ ನಾಯ್ಕ ಎಂಬಾತರ ವಿರುದ್ಧ ಶಿರಸಿ ಗಾಂಧೀನಗರದ ರಾಘವೇಂದ್ರ ಸಿದ್ದಣ್ಣ ಕಲ್ಲಕುಟಕರ್ ನ್ಯಾಯಾಲಯದ ಮೊರೆ ಹೋಗಿ ಪೊಲೀಸ್ ದೂರು ದಾಖಲಿಸಿದ್ದಾರೆ.
ರಾಘವೇಂದ್ರ ಕಲ್ಲುಕುಟಕರ್ ಕಾರು ವ್ಯಾಪಾರ ಮಾಡುತ್ತಿದ್ದು, ವೆಂಕಟ್ರಮಣ ನಾಯ್ಕರ ಕಾರನ್ನು ಮಾರಾಟ ಮಾಡಿಸಿದ್ದರು. ಅದರ ಪ್ರಕಾರ ಕಾರು ಮಾರಾಟದ
6.30 ಲಕ್ಷ ರೂ ಹಣವನ್ನು ಚೆಕ್ ಮೂಲಕ ಅವರಿಗೆ ಪಾವತಿಸಿದ್ದರು. 14 ಜನವರಿ 2023ರಂದು ಚೆಕ್ ಪಡೆಯಲು ರಾಘವೇಂದ್ರ ಕಲ್ಲುಕುಟಕರ್ ಅವರ ವೀರಭದ್ರಗಲ್ಲಿಯಲ್ಲಿರುವ ಕಚೇರಿಗೆ ಬಂದಿದ್ದ ವೆಂಕಟ್ರಮಣ ನಾಯ್ಕ ಅಲ್ಲಿದ್ದ ಖಾಲಿ ಚಕ್ಕುಗಳನ್ನು ಕದ್ದು ಸಹಿ ನಕಲು ಮಾಡಿ ರಾಘವೇಂದ್ರ ಕಲ್ಲುಕುಟಕರ್ ವಿರುದ್ಧ ಚೆಕ್ ಬೌನ್ಸ ಕೇಸ್ ದಾಖಲಿಸಿದ್ದರು ಎಂಬುದು ಆರೋಪ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.