ಶಿರಸಿ: ಕೆಲಸದ ವಿಷಯವಾಗಿ ಇಬ್ಬರು ಕಟ್ಟಡ ಕಾರ್ಮಿಕರ ನಡುವೆ ಹೊಡೆದಾಟ ನಡೆದಿದೆ.
ಗೌಂಡಿ ಕೆಲಸ ಮಾಡುವ ಅಣ್ಣಪ್ಪ ಮಲ್ಲೇಶಪ್ಪ ಹುಲ್ಲಾಳ ಹಾಗೂ ಅದೇ ಕೆಲಸ ಮಾಡುವ ಶಂಕರ ತೆಂಗಪ್ಪ ನಾಯ್ಕ ಹೊಡೆದಾಡಿಕೊಂಡಿದ್ದಾರೆ. ಎಸಳೆ ರಸ್ತೆಯ ಕಸದಗುಡ್ಡೆ ಬಳಿಯವರಾಗಿದ್ದು, ಶಂಕರ್ ಸಹ ಎಸಳೆ ರಸ್ತೆಯ ನಿವಾಸಿ. ಇವರಿಬ್ಬರು ಸ್ನೇಹಿತರಾಗಿದ್ದರೂ ಸಹ ಕೆಲಸದ ವಿಷಯವಾಗಿ ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಗಾಯಗೊಂಡ ಅಣ್ಣಪ್ಪ ಟಿಎಸ್ಎಸ್ ಆಸ್ಪತ್ರೆ ಸೇರಿದ್ದಾರೆ.
ಸೆ 25ರ ಸಂಜೆ ಶಿರಸಿಯ ಕ್ವಾಲಿಟಿ ವೈನ್ಸ ಬಳಿ ಅಣ್ಣಪ್ಪ ಹಾಗೂ ಶಂಕರ್ ಮಾತನಾಡುತ್ತಿದ್ದರು. ಈ ವೇಳೆ `ನನ್ನ ಕೆಲಸದ ಬಗ್ಗೆ ನೀನು ಮಾತನಾಡಬೇಡ\’ ಎಂದು ಶಂಕರ್ ಅಣ್ಣಪ್ಪಗೆ ಎಚ್ಚರಿಕೆ ನೀಡಿದ್ದು, ಇದೇ ವಿಷಯವಾಗಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಆಗ ಅಲ್ಲಿದ್ದ ಗಾಜಿನ ಲೋಟದಲ್ಲಿ ಶಂಕರ್ ಅಣ್ಣಪ್ಪ ಅವರ ತಲೆಗೆ ಕುಟ್ಟಿ, ಮುಖಕ್ಕೆ ಗೀರಿದ್ದಾರೆ. ಇದರಿಂದ ಅಣ್ಣಪ್ಪ ಗಾಯಗೊಂಡಿದ್ದಾರೆ.
ನoತರ ಅಲ್ಲಿದ್ದವರು ಗಾಯಾಳುವನ್ನು ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡ ಅಣ್ಣಪ್ಪ ಪೊಲೀಸ್ ದೂರು ನೀಡಿದ್ದಾರೆ.