ಸಿದ್ದಾಪುರ: ವಾಸ್ತವ್ಯದ ಮನೆಯನ್ನೇ ಮದ್ಯದ ಮಳಿಗೆಯನ್ನಾಗಿ ಮಾಡಿಕೊಂಡಿದ್ದ ಹೆಗ್ಗರಣಿಯ ರವಿ ಮಾಬ್ಲೇಶ್ವರ ನಾಯ್ಕ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನ ಮನೆ ಪರಿಶೀಲನೆ ನಡೆಸಿದ ಪಿಎಸ್ಐ ಅನಿಲ ಬಿ ಎಂ ಅಲ್ಲಿದ್ದ ಮದ್ಯದ ಪ್ಯಾಕೇಟ್\’ಗಳನ್ನು ವಶಕ್ಕೆ ಪಡೆದರು.
ಮನೆ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ರವಿ ನಾಯ್ಕ ಮದ್ಯ ಮಾರಾಟ ಮಾಡುತ್ತಿದ್ದ. ಜೊತೆಗೆ ಅಲ್ಲಿಯೇ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ. ಹಗಲು-ರಾತ್ರಿ ಎಂಬ ಬೇದವಿಲ್ಲದೇ ಸದಾಕಾಲ ಆತ ಈ ವ್ಯವಹಾರ ನಡೆಸುತ್ತಿದ್ದ. ಆದರೆ, ಮದ್ಯ ಮಾರಾಟ ಹಾಗೂ ಸೇವನೆಗೆ ಸ್ಥಳಾವಕಾಶ ನೀಡಲು ಆತನ ಬಳಿ ಯಾವುದೇ ಅನುಮತಿ ಇರಲಿಲ್ಲ.
ಪೊಲೀಸರು ದಾಳಿ ನಡೆಸಿದಾಗ ಓರಿಜನಲ್ ಚಾಯ್ಸ ಟ್ರೆಟ್ರಾಪ್ಯಾಕ್ಗಳು ಸಿಕ್ಕಿವೆ. ಜೊತೆಗೆ ಮದ್ಯ ಸೇವಿಸಿ ಬಿಸಾಡಿದ್ದ ಖಾಲಿ ಪ್ಯಾಕೇಟನ್ನು ಸಹ ಪೊಲೀಸರು ಸಾಕ್ಷಿಗಾಗಿ ಸಂಗ್ರಹಿಸಿದ್ದಾರೆ. ಮನೆಯನ್ನು ಮದ್ಯ ಮಾರಾಟ ಹಾಗೂ ಸೇವನೆ ಕೇಂದ್ರವನ್ನಾಗಿಸಿಕೊAಡ ಕಾರಣ ರವಿ ನಾಯ್ಕ ಇದೀಗ ನ್ಯಾಯಾಲಯ ತಿರುಗಾಟ ಮಾಡಬೇಕಿದೆ.