ಭಟ್ಕಳ: ಕೂಲಿ, ಚಾಲಕ, ಮರಗೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ 8 ಜನ ಅಂದರ್ ಬಾಹರ್ ಇಸ್ಪೀಟ್ ಆಟಕ್ಕೆ ಮರುಳಾಗಿ ಪೊಲೀಸರ ಆತಿಥ್ಯ ಸ್ವೀಕರಿಸಿದ್ದಾರೆ.
ಸೆ 26ರ ರಾತ್ರಿ 11.20ಕ್ಕೆ ತಲಂದ ಗ್ರಾಮದ ಸ್ಮಶಾನ ಅಂಚಿನ ಅರಣ್ಯ ಪ್ರದೇಶದಲ್ಲಿ ತಲಾಂದದ ಜಗದೀಶ ಮಾಸ್ತಪ್ಪ ನಾಯ್ಕ, ವಸಂತ ಮಾಸ್ತಪ್ಪ ನಾಯ್ಕ, ಅರುಣ ಮಂಜುನಾಥ ನಾಯ್ಕ, ಮಾದೇವ ನಾಗಪ್ಪ ನಾಯ್ಕ, ವಿನೋದ ಮಂಜಯ್ಯ ನಾಯ್ಕ, ದೇವೇಂದ್ರ ಸೋಮಯ್ಯ ಗೌಂಡ, ಶ್ರೀನಿವಾಸ ನಾಗಪ್ಪ ನಾಯ್ಕ, ಕೃಷ್ಣ ಸುಕ್ರ ನಾಯ್ಕ ಸೇರಿ ಅಂದರ್ ಬಾಹರ್ ಇಸ್ಪಿಟ್ ಆಡುತ್ತಿದ್ದರು. ಪೊಲೀಸ್ ಉಪ ನಿರೀಕ್ಷಕ ಬರಮಪ್ಪ ಬೆಳಗಲಿ ಅವರ ಮೇಲೆ ದಾಳಿ ನಡೆಸಿದಾಗ ದಿಕ್ಕಾಪಾಲಾಗಿ ಓಡಲು ಶುರು ಮಾಡಿದ್ದರು. ಆದರೆ, ತಮ್ಮ ತಂಡದೊoದಿಗೆ ಎಲ್ಲರನ್ನು ಹಿಡಿದ ಅವರು ಎಂಟು ಜನರನ್ನು ಗುರುತಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.