ಭಟ್ಕಳ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮಂಗನಾಟ ನಡೆಸಿದ ಮೀನು ಕಾರ್ಮಿಕ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾನೆ.
ಜಾರ್ಖಂಡದ ಸಿಂಬಾಗದವನಾದ ಬಂದು ಬಯ್ಯಾ (31) ಎಂಬಾತ ಇಲ್ಲಿನ ದೋಣಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸೆ 24ರಂದು ಮೀನುಗಾರಿಕೆಗೆ ಹೊರಟ ಬೋಟಿನಲ್ಲಿ ಈತ ತೆರಳಿದ್ದ. ಆ ದಿನ ಸಂಜೆ 6ಗಂಟೆ ಸುಮಾರಿಗೆ ಸಮೀಪ ಹಾದು ಹೋಗುತ್ತಿದ್ದ ಇನ್ನೊಂದು ಬೋಟಿಗೆ ಆತ ನೆಗೆದಿದ್ದು, ಆಯ ತಪ್ಪಿ ಸಮುದ್ರಕ್ಕೆ ಬಿದ್ದಿದ್ದಾನೆ. ಆಗ ಎರಡೂ ಬೋಟಿನವರು ಸಾಕಷ್ಟು ಹುಡುಕಾಟ ನಡೆಸಿದರೂ ಆತ ಸಿಕ್ಕಿಲ್ಲ. ಸೆ 26ರಂದು ಅಳ್ವೆಕೊಡಿ ಸಮುದ್ರ ತೀರದಲ್ಲಿ ಬಂದು ಬಯ್ಯಾನ ಶವ ಸಿಕ್ಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.