ಯಲ್ಲಾಪುರ: ಈರಾಪುರದಿಂದ ಕಳಚೆಗೆ ತೆರಳಿ ಯಲ್ಲಾಪುರಕ್ಕೆ ಬರಬೇಕಿದ್ದ ಸರ್ಕಾರಿ ಬಸ್ಸು ಭಾನುವಾರ ಬೆಳಗ್ಗೆ ಗಟಾರಕ್ಕೆ ಬಿದ್ದಿದೆ.
ಎದುರಿನಿಂದ ಬಂದ ಬೈಕ್ ತಪ್ಪಿಸುವ ಬರದಲ್ಲಿ ಬಸ್ಸು ಅಪಘಾತವಾಗಿದೆ. ಶನಿವಾರ ಸಂಜೆ ಈ ಬಸ್ಸು ಈರಾಪುರಕ್ಕೆ ತೆರಳಿತ್ತು. ರಾತ್ರಿ ಅಲ್ಲಿಯೇ ವಸತಿಯಿದ್ದು, ಭಾನುವಾರ ಬೆಳಗ್ಗೆ ಕಳಚೆಗೆ ತೆರಳಿ ಯಲ್ಲಾಪುರಕ್ಕೆ ಬರಬೇಕಿತ್ತು. ಈ ನಡುವೆ ಬಸ್ಸು ರಸ್ತೆ ಅಂಚಿನ ಗಟಾರಕ್ಕೆ ಉರುಳಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ಟೇರಿಂಗ್ ಕಟ್ ಆಗಿದ್ದರಿಂದ ಬಸ್ಸು ಮರಕ್ಕೆ ಸಿಲುಕಿದ ಬಗ್ಗೆ ಮಾಹಿತಿ ಹರಿದಾಡುತ್ತಿದ್ದು, `ಎದುರಿನಿಂದ ಬಂದ ಬೈಕ್\’ಗೆ ಡಿಕ್ಕಿ ಆಗುವುದನ್ನು ತಪ್ಪಿಸುವಾಗ ಬಸ್ಸು ರಸ್ತೆ ಅಂಚಿಗೆ ಹಾಕಲಾದ ಮಣ್ಣಿಗೆ ಇಳಿದಿದೆ\’ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು. ಬಸ್ಸಿನ ಒಳಗಿದ್ದ ಕೆಲ ಪ್ರಯಾಣಿಕರಿಗೆ ತೆರಚಿದ ಗಾಯಗಳಾಗಿದ್ದು, ಯಾರೂ ಆತಂಕ ಪಡಬೇಕಾಗಿಲ್ಲ.