ಶಿರಸಿ: ಬಸ್ ನಿಲ್ದಾಣದ ಬಳಿ ಮಾದಕ ವ್ಯಸನ ಸೇವನೆ ಹಾಗೂ ಮಾರಾಟದಲ್ಲಿ ತೊಡಗಿದ್ದ ಮಂಜುನಾಥ ಮಾರುತಿ ಪೂಜಾರಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ನಶೆ ಇಳಿಸಿದ್ದಾರೆ.
ಕಸ್ತೂರಿಬಾ ನಗರದ 1ನೇ ಕ್ರಾಸಿನಲ್ಲಿ ವಾಸಿಸುವ ಮಂಜುನಾಥ ಪೂಜಾರಿ ಸೆ 28ರಂದು ಮಧ್ಯಾಹ್ನ ಗಣೇಶನಗರದ ಹೊಸ ಬಸ್ ನಿಲ್ದಾಣದ ಬಳಿ ಗಾಂಜಾ ಸೇವಿಸಿದ್ದ. ನಂತರ ವಾಲಿಬಾಲ್ ಮೈದಾನದ ಬಳಿ ಅಮಲಿನಲ್ಲಿದ್ದ ಆತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಮಾತು ತೊದಲುತ್ತಿದ್ದ ಕಾರಣ ಮಾದಕ ವಸ್ತು ಸೇವನೆ ಅನುಮಾನದ ಹಿನ್ನಲೆ ಆತನನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಅಲ್ಲಿನ ವೈದ್ಯರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.
ಪ್ರಸ್ತುತ ವೈದ್ಯಕೀಯ ವರದಿ ಹೊರಬಿದ್ದಿದ್ದು, ಅದರಲ್ಲಿ ಮಂಜುನಾಥ ಪೂಜಾರಿ ಮಾದಕ ವ್ಯಸನ ಸೇವಿಸಿರುವುದು ದೃಢವಾಗಿದೆ. ಹೀಗಾಗಿ ಪಿಎಸ್ಐ ನಾಗಪ್ಪ ಬಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.