ಅಂಕೋಲಾ: ನಿವೃತ್ತ ಸರ್ಕಾರಿ ನೌಕರ ಮೋಹನ ನಾರಾಯಣ ನಾಯಕ (72) ಅವರ ಮನೆಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ.
ಹೊನ್ನೇಕೇರಿಯ ಕೇಣಿ ರಸ್ತೆಯಲ್ಲಿ ಮೋಹನ ನಾಯಕ ಅವರು ವಾಸವಾಗಿದ್ದಾರೆ. ಸೆ 28ರಂದು ಅವರ ಮನೆಯಲ್ಲಿ ಯಾರೂ ಇರಲಿಲ್ಲ. ಆ ವೇಳೆ ಮನೆಗೆ ಬಂದ ಕಳ್ಳರು ಮನೆಯ ಕೋಣೆಗೆ ಹೋಗಿ ಅಲ್ಲಿನ ಗೋಡೆ ಕಪಾಟಿನಲ್ಲಿದ್ದ ಬಂಗಾರದ ಬಳೆ, ಮಂಗಲಸೂತ್ರ, ಕಿವಿಯೋಲೆ ಅಪಹರಿಸಿದ್ದಾರೆ. ಇದಾದ ನಂತರ ಇನ್ನೊಂದು ಕೋಣೆಗೆ ಹೋಗಿ ಅಲ್ಲಿದ್ದ ಕಪಾಟು ಒಡೆದು ಹಣ ಹಾಗೂ ಇನ್ನಷ್ಟು ಬಂಗಾರವನ್ನು ದೋಚಿದ್ದಾರೆ.
ಮೋಹನ ನಾಯಕ ಅವರ ಮನೆಯಲ್ಲಿದ್ದ 7.35 ಲಕ್ಷ ರೂ ಮೌಲ್ಯದ ಬಂಗಾರದ ಆಭರಣ ಹಾಗೂ 50 ಸಾವಿರ ರೂ ಹಣ ಕಳ್ಳತನವಾಗಿದೆ.