ಶಿರಸಿ: `ಸ್ವಚ್ಛತಾ ಹೀ ಸೇವಾ ಅಭಿಯಾನವು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಭಿಯಾನ. ಸ್ವಚ್ಛತೆ ನಮ್ಮೆಲ್ಲರ ಹೊಣೆಗಾರಿಕೆ ಭಾಗ\’ ಎಂದು ಕೆನರಾ ಬ್ಯಾಂಕ್ ಕ್ಷೇತ್ರಿಯ ಕಾರ್ಯಾಲಯದ ಸಹಾಯಕ ಮಹಾಪ್ರಬಂಧಕ ಮುರಾರಿ ಮೋಹನ್ ಹೇಳಿದರು.
ಕೆನರಾ ಬ್ಯಾಂಕ್ ಕ್ಷೇತ್ರಿಯ ಕಾರ್ಯಾಲಯದಿಂದ ಶಿರಸಿಯ ದೇವಿಕೆರೆಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಸ್ವಚ್ಛತಾ ಹೀ ಸೇವಾ ಕಾರ್ಯವು ನಮ್ಮ ಮನೆಯಿಂದಲೇ ಆರಂಭವಾಗಬೇಕು. ಪರಿಸರವನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಇಟ್ಟುಕೊಳ್ಳುವುದರಿಂದ ಆರೋಗ್ಯವಂತರಾಗಿ ಜೀವನ ನಡೆಸಬಹುದು. ನಾವೆಲ್ಲರೂ ನಮ್ಮ ಸುತ್ತಲಿನ ಪರಿಸರವನ್ನು ತ್ಯಾಜ್ಯ ಮುಕ್ತವಾಗಿ ಇಟ್ಟುಕೊಳ್ಳುವುದರಿಂದ ರೋಗಮುಕ್ತ ಜೀವನ ನಡೆಸಬಹುದು. ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಮೂಲಕ ಭಾರತ ಸರ್ಕಾರ ಸ್ವಚ್ಛತೆಗಾಗಿ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನ ನಮಗೆಲ್ಲ ಮಾದರಿ ಆಗಿದೆ\’ ಎಂದರು.
ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಸಿರಸಿ ನಗರಸಭೆಯ ಪೌಕಾರ್ಮಿಕರನ್ನ ಸನ್ಮಾನಿಸಲಾಯಿತು. ಜತೆಗೆ ಸಸಿಗಳನ್ನು ನಡೆಲಾಯಿತು. ಕಿರಣ್ ಜಗತಾಪ, ಬಾಳಾಸಾಹೇಬ್ ಘಾಂಡಿಗೆ, ರೋಹಿತ್ ಕೊಡಲಕರ್, ಮಹೇಂದ್ರ ಹೆಗಡೆ, ಶ್ರೀಧರ್, ಪ್ರವೀಣ್ ಸಜ್ಜನ್, ಜಗದೀಶ್ ಜೆ.ಬಿ, ಪ್ರಸಾದ್ ರಾಮದುರ್ಗ, ದರ್ಶನ್ ನೇತ್ರಕರ್ ಸೇರಿದಂತೆ ಹಲವರು ಇದ್ದರು.
ಕಾರ್ಯಕ್ರಮದಲ್ಲಿ ಸಿರಸಿ ಕೆನರಾ ಬ್ಯಾಂಕ್ ಸಿಬ್ಬಂದಿ ಪಾಲ್ಗೊoಡಿದ್ದರು.