ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋವಾ ಮಾದರಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ಭಾನುವಾರ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರವಾರ ಕಡಲತೀರದಲ್ಲಿ ನಡೆದ ಗಾಳಿಪಟ ಹಾಗೂ ಮರಳು ಶಿಲ್ಪ ಸ್ಪರ್ಧೆಯಲ್ಲಿ ಅವರು ಮಾತನಾಡಿದ್ದು, `ಉತ್ತರ ಕನ್ನಡ ಜಿಲ್ಲೆಯು ಆಕರ್ಷಿಕ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಅತ್ಯಾಕರ್ಷಣೆಯ ಯೋಜನೆಗಳ ಮೂಲಕ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಕರೆತರಲು ಇಲ್ಲಿಯೂ ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲಾಗುತ್ತದೆ\’ ಎಂದರು.
`ಗೋವಾಗಿAತಲೂ ಉತ್ತಮ ಕಡಲತೀರಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಸಿಆರ್ಜಡ್ ಅನುಮತಿ ಪಡೆದು ಅವುಗಳ ಅಭಿವೃದ್ಧಿ ಮಾಡಲಾಗುತ್ತದೆ. ಜೊತೆಗೆ ಸ್ಥಳೀಯರಿಗೆ ಉದ್ಯೋಗ, ಸಾಂಪ್ರದಾಯಿಕ ವಸ್ತುಗಳ ಮಾಹಿತಿಗೆ ಒತ್ತು ನೀಡಲಾಗುತ್ತದೆ\’ ಎಂದರು. `ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಾಗೂ ಪ್ರವಾಸಿಗರ ಮನರಂಜನೆಗಾಗಿ ಜಿಲ್ಲೆಯ ಕಡಲ ತೀರದಲ್ಲಿ ಪ್ಯಾರ ಸೈಲಿಂಗ್ ಸೇರಿದಂತೆ ಅನೇಕ ಜಲ ಸಾಹಸ ಕ್ರೀಡೆಗಳು ಆರಂಭಿಸುವುದರಿAದ ಪ್ರವಾಸೋದ್ಯಮ ಅಭಿವೃದ್ಧಿಯೊಂದಲು ಸಾಧ್ಯವಾಗುತ್ತದೆ\’ ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಮಾತನಾಡಿ, `ಜಿಲ್ಲೆಯಲ್ಲಿ ಅನೇಕ ಪ್ರವಾಸಿ ಸ್ಥಳಗಳಿವೆ. ಇಲ್ಲಿಗೆ ಆಗಮಿಸುವ ಪ್ರವಾಸಿಗಳಿಗೆ ಪ್ರವಾಸಿ ತಾಣಗಳ ಪರಿಚಯಿಸಲು ಕಾಫಿ ಟೇಬಲ್ ಬುಕ್ ಮಾಡಲು ನಿರ್ಧರಿಸಲಾಗಿದೆ\’ ಎಂದರು.