ಭಟ್ಕಳ: ಕಾರವಾರದ ಸದಾಶಿವಗಡದ ದಾವೂದ ನಜೀರ್ ಶೇಖ್ ಎಂಬಾತ ಮುರುಡೇಶ್ವರದಲ್ಲಿ ಗಾಂಜಾ ಸೇವಿಸಿ ಸಿಕ್ಕಿಬಿದ್ದಿದ್ದಾನೆ.
ಸೆ 28ರ ಸಂಜೆ ಮುರುಡೇಶ್ವರ ಕಡಲತೀರದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ನಜೀರ್ ಶೇಖ್\’ನನ್ನು ಪೊಲೀಸ್ ಉಪನಿರೀಕ್ಷಕ ಹಣಮಂತ ಬಿರಾದರ್ ವಿಚಾರಿಸಿದರು. ಆ ವೇಳೆ ಆತ ಗಾಂಜಾ ಸೇವಿಸಿದ ಅನುಮಾನ ವ್ಯಕ್ತವಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಆಗ ಆತ ಗಾಂಜಾ ಸೇವಿಸಿರುವುದು ದೃಢವಾಗಿದೆ. ಈ ಹಿನ್ನಲೆ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.