ಕಾರವಾರ: ಐಟಿಐ ಮಲ್ಲಿಕಾರ್ಜುನ ಕಾಲೇಜು ಪ್ರಾಚಾರ್ಯ ಪ್ರಕಾಶ ವಿಶ್ವನಾಥ ಕಲ್ಗುಟ್ಕರ್ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ.
ಕಿನ್ನರ ಬೋರಿಭಾಗದವರಾಗಿದ್ದ ಅವರು ಹಬ್ಬುವಾಡದ ಲಲಿತಾ ಅಪಾರ್ಟಮೆಂಟ್\’ನಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮದ್ಯ ಸೇವನೆ ಮಾಡುತ್ತಿದ್ದ ಅವರು ಮದ್ಯ ಸೇವಿಸುವ ಅವಧಿಯಲ್ಲಿ ಮನೆಯ ಬಾಗಿಲು ಹಾಕುತ್ತಿರಲಿಲ್ಲ. ರಾತ್ರಿ ಸಮಯದಲ್ಲಿ ಸಹ ಮನೆ ಒಳಗಡೆಯಿಂದ ಲಾಕ್ ಮಾಡುತ್ತಿರಲಿಲ್ಲ. ರಾತ್ರಿ ವೇಳೆ ನಶೆಯಲ್ಲಿರುತ್ತಿದ್ದರು.
ಹೀಗಿರುವಾಗ ಸೆ 28ರಂದು ಕಾಲೇಜಿನಲ್ಲಿ ಜವಾನರಾಗಿ ಕೆಲಸ ಮಾಡುವ ಅಕ್ಷಯ್ ಅವರು ಊಟ ಕೊಡಲು ಪ್ರಕಾಶ ಕಲ್ಗುಟ್ಕರ್ ಅವರ ಅಪಾರ್ಟಮೆಂಟಿಗೆ ತೆರಳಿದ್ದರು. ಆಗ, ಹಾಸಿಗೆಯಿಂದ ಬಿದ್ದು ಅವರು ಹಣೆಗೆ ಪೆಟ್ಟು ಮಾಡಿಕೊಂಡಿದ್ದನ್ನು ಅಕ್ಷಯ್ ಗಮನಿಸಿದ್ದರು. ಬೆಡ್ ರೂಮಿನಿಂದ ಹಾಲಿಗೆ ಬಂದು ಸೋಪಾ ಮೇಲೆ ಕೂತಿದ್ದ ಪ್ರಕಾಶ ಕಲ್ಗುಟ್ಕರ್ ಅವರು ಅಡುಗೆ ಮನೆಗೆ ಹೋಗುವಾಗ ರಕ್ತಸ್ರಾವದಿಂದ ಸಾವನಪ್ಪಿರುವಂತೆ ಗೋಚರವಾಗಿದೆ.
ಅದಾಗಿಯೂ ಅವರ ಸಾವಿನಲ್ಲಿ ಅನುಮಾನ ಕಾಣುತ್ತಿರುವುದಾಗಿ ಪ್ರಕಾಶ ಅವರ ತಮ್ಮ ಲಕ್ಷ್ಮೀಕಾಂತ ಕಲ್ಗುಟಕರ್ ಪೊಲೀಸ್ ದೂರು ನೀಡಿದ್ದಾರೆ.